ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ನಾಲ್ಕು ಮಂದಿಗೆ ಕೊರೊನಾ ದೃಢಮಂಗಳೂರು; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ನಾಲ್ಕು ಮಂದಿಗೆ ಕೊರೊನಾ ದೃಢಪಟ್ಟಿದೆ.
ಇಬ್ಬರು ಸೌದಿ ಅರೇಬಿಯಾದಿಂದ ಇಬ್ಬರು ಮಹಾರಾಷ್ಟ್ರ ದಿಂದ ಬಂದವರಿಗೆ ಕೊರೊನಾ ದೃಢಪಟ್ಟಿದೆ.
ಸೌದಿ ಅರೇಬಿಯಾದಿಂದ  ಬಂದ 29 , 60 ವರ್ಷದ ಇಬ್ಬರು ಪುರುಷರಿಗೆ  ಹಾಗೂ ಮುಂಬಯಿನಿಂದ ಬಂದ 30,40 ವರ್ಷದ ಪುರುಷರಿಗೆ ಕೊರೊನಾ ದೃಢಪಟ್ಟಿದೆ. 
ಸೌದಿ‌ ಅರೇಬಿಯಾದಿಂದ ಬಂದ 29 ವರ್ಷದ ಯುವಕ  ಉಡುಪಿ ಜಿಲ್ಲೆಯ ಕಾರ್ಕಳ ,60 ವರ್ಷದ ವ್ಯಕ್ತಿ ಶಿವಮೊಗ್ಗ ಜಿಲ್ಲೆಯ ಸಾಗರದವರಾಗಿದ್ದಾರೆ. ಇವರನ್ನು ಕ್ವಾರಂಟೈನ್ ನಲ್ಲಿರಿಸಲಾಗಿದ್ದು ಇಂದು ಗಂಟಲುದ್ರವ ಪರೀಕ್ಷೆ  ನಡೆಸಿದಾಗ ಪಾಸಿಟಿವ್ ಬಂದಿದೆ. ಮುಂಬಯಿನಿಂದ ಬಂದ 30 ಮತ್ತು 40 ವರ್ಷದ  ಪುರುಷರು ಉಡುಪಿ ಯಲ್ಲಿ ಕ್ವಾರಂಟೈನ್ ಮುಗಿಸಿ  ಮೂಡಬಿದ್ರೆಗೆ ಬಂದಿದ್ದು ಇಂದು ಪರೀಕ್ಷೆ ನಡೆಸಿದಾಗ ಪಾಸಿಟಿವ್ ಬಂದಿದೆ.

Comments