ಮದುವೆ ಕಾರ್ಯಕ್ರಮದಲ್ಲಿ ಕೊರೋನಾ ವಾರಿಯಾರ್ಸ್‌ಗಳಿಗೆ ಸನ್ಮಾನ


ಮಂಗಳೂರು : ನಗರದ ಖ್ಯಾತ ಉದ್ಯಮಿ ಹಾಗೂ ಸಮಾಜ ಸೇವಕ ಶ್ರೀಕರ್ ಪ್ರಭು ಅವರ ಸಹೋದರಿಯ ಮಗಳ ( ದಿವ್ಯಾ ಹಾಗೂ ರಾಕೇಶ್) ಮದುವೆ ಇತ್ತೀಚಿಗೆ ನಗರದ ಬಾಳಂಭಟ್ ಸಭಾಂಗಣದಲ್ಲಿ ಸರಳವಾಗಿ ನಡೆಯಿತು.

ಈ ಶುಭ ಸಂದರ್ಭದಲ್ಲಿ ಕೊರೋನಾ ಮಾಹಾಮಾರಿಯ ಹಿನ್ನೆಲೆಯಲ್ಲಿ ಸರ್ಕಾರ ಜಾರಿಗೆ ತಂದಿದ್ದ ಲಾಕ್‌ಡೌನ್ ಸಂದರ್ಭದಲ್ಲೂ ಮನೆ ಮನೆಗಳಿಗೆ ತೆರಳಿ  ಅಡುಗೆ ಅನಿಲದ ಸಿಲಿಂಡರ್ ಅನ್ನು ವಿತರಿಸಿದ ಮೂವರು ಗ್ಯಾಸ್ ಸಂಸ್ಥೆಯ ಸಿಬ್ಬಂದಿಗಳನ್ನು  ಕೊರೋನಾ ವಾರಿಯಾರ್ಸ್ ಎಂದು ಪರಿಗಣಿಸಿ ಮದುವೆ ಕಾರ್ಯಕ್ರಮದಲ್ಲಿ ಶ್ರೀಕರ್ ಪ್ರಭು ಅವರು ಸನ್ಮಾನಿಸಿ, ಗೌರವಿಸಿದರು.

Comments