ದೇರಳಕಟ್ಟೆ ಬಿಎಸ್ಎನ್ ಎಲ್ ಕಚೇರಿಯಲ್ಲಿ ಬೆಂಕಿ


ಮಂಗಳೂರು: ದೇರಳಕಟ್ಟೆಯಲ್ಲಿರುವ ಬಿಎಸ್ಸೆನ್ನೆಲ್ ಜ್ಯೂನಿಯರ್ ಟೆಲಿಕಾಂ ಎಕ್ಸ್‌ಚೇಂಜ್ ಕಚೇರಿಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಘಟನೆ ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

ಮಂಗಳವಾರ ಬೆಳಗ್ಗೆ 10 ಗಂಟೆ ವೇಳೆ ಕಚೇರಿ ತೆರೆದಾಗ ಅವಘಡ ಬೆಳಕಿಗೆ ಬಂದಿದೆ. ಕಚೇರಿಯೊಳಗಡೆ ಹೊಗೆ ಆವರಿಸಿಕೊಂಡಿತ್ತು. ಬಳಿಕ ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ.

 ಬೆಂಕಿಯಿಂದ ಹಲವು ಉಪಕರಣಗಳಿಗೆ ಹಾನಿಯಾಗಿವೆ ಎಂದು ತಿಳಿದುಬಂದಿದೆ

Comments