ಮಂಗಳೂರಿನಲ್ಲಿ ಕೊರೊನಾ ಸೋಂಕಿತ ಯುವಕ ಸಾವು; ಜಿಲ್ಲೆಯಲ್ಲಿ ಎಂಟಕ್ಕೇರಿದ ಸಾವಿನ ಸಂಖ್ಯೆಮಂಗಳೂರು : ಮಂಗಳೂರಿನಲ್ಲಿ ಇಂದು  ಕೊರೊನಾ ಸೋಂಕಿತ 26 ವರ್ಷದ ಯುವಕ  ಸಾವನ್ನಪ್ಪಿದ್ದಾರೆ.
 ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನ ಸಂಪರ್ಕದಿಂದಾಗಿ ಮೃತಪಟ್ಟವರ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ.

ಮೃತ ಯುವಕ ಮುಂಬೈನಿಂದ ಇತ್ತೀಚೆಗೆ ಮಂಗಳೂರಿಗೆ ಆಗಮಿಸಿದ್ದು, ಈತನನ್ನು ಮೇ 28 ಮತ್ತು 29 ರಂದು ಜಿಲ್ಲಾಡಳಿತದ ಅಧೀನದ ಕ್ವಾರಂಟೈನ್ ನಲ್ಲಿ ಇರಿಸಲಾಗಿತ್ತು.

ಈತ "ದೀರ್ಘಕಾಲದ ಮೂತ್ರಪಿಂಡ ಕಾಯಿಲೆ" ಯಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ವಿಶೇಷ ವರ್ಗಕ್ಕೆ ಸೇರ್ಪಡೆಗೊಂಡ ಕಾರಣ ಯುವಕನು ಜೂ.10ರವರೆಗೆ ಹೋಮ್ ಕ್ವಾರಂಟೈನ್ ಪೂರೈಸಿದ್ದರು.

ಜೂ.12ರ ರಾತ್ರಿ ಯುವಕನ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದ್ದರಿಂದ ಈತನನ್ನು ನಗರದ ಖಾಸಗಿ ಆಸ್ಪತ್ರೆಗೆ ಕರೆತರುವ ಮಾರ್ಗ ಮಧ್ಯೆ ಮೃತಪಟ್ಟಿದ್ದು, ಈತನ ಗಂಟಲು ದ್ರವ‌ ಮಾದರಿಯ ವರದಿಯಲ್ಲಿ ಕೊರೋನ ಸೋಂಕು ಇರುವುದು ದೃಢಪಟ್ಟಿದೆ

Comments