ಜನರ ಲೂಟಿಗೆ ಮುಂದಾಗಿರುವುದೇ ಮೋದಿ ಸರ್ಕಾರದ ಎರಡನೇ ಅವಧಿಯ ಸಾಧನೆ' - ರಮಾನಾಥ್‌ ರೈ ಆರೋಪ

'
 
ಮಂಗಳೂರು : ಕೇಂದ್ರ ಸರ್ಕಾರ ಭಾವನಾತ್ಮಕವಾಗಿ ಜನರನ್ನು ವಂಚನೆ ಮಾಡ ಹೊರಟ್ಟಿದ್ದು, ಸರ್ಕಾರಿ ಸ್ವಾಮ್ಯ ಸಂಸ್ಥೆಗಳನ್ನು ಖಾಸಗೀಕರಣ ಮಾಡಲು ಮುಂದಾಗಿದ್ದಾರೆ. ಜನರನ್ನು ಲೂಟಿ ಮಾಡಲು ಹೊರಟಿರುವುದೇ ಮೋದಿ ಸರಕಾರ ಎರಡನೇ ಅವಧಿಯ ಸಾಧನೆ ಎಂದು ಮಾಜಿ ಸಚಿವ ರಮಾನಾಥ್‌ ರೈ ಆರೋಪಿಸಿದ್ದಾರೆ.


ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ವಿಮಾನ ನಿಲ್ದಾಣ, ಕಲ್ಲಿದ್ದಲು ನಿಗಮಗಳು, ಬಿಎಸ್ಎನ್ಎಲ್ ಇನ್ನಿತರ ಕಂಪನಿಗಳನ್ನು ಖಾಸಗೀಕರಣ ಮಾಡಲು ಮುಂದಾಗಿದೆ. ಮೆಸ್ಕಾಂ ಖಾಸಗೀಕರಣ ಮಾಡಲು ಹೊರಟಿರುವುದು ಸರಕಾರ ಸಾಧನೆಯೇ? ಎಂದು ಪ್ರಶ್ನಿಸಿದರು.

ಖಾಸಗಿ ಕಂಪನಿಯನ್ನು ಬದುಕಿಸಲು ಸರಕಾರಿ ಕಂಪನಿ ಮುಚ್ಚಲು ಕೇಂದ್ರ ಸರ್ಕಾರ ಮುಂದಾಗಿದ್ದು ಜಿಯೋ ಕಂಪನಿಯನ್ನು ಬ್ರ್ಯಾಂಡ್ ಅಂಬಾಸಿಡರ್ ಮಾಡಲು ಮೋದಿ ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

 ಕೇಂದ್ರ ಸರ್ಕಾರವು ಭಾವನಾತ್ಮಕವಾಗಿ ಜನರನ್ನು ವಂಚಿಸಲು ಹೊರಟಿದ್ದು ಸ್ವಾತಂತ್ರ್ಯ ಹೋರಾಟಗಾರರ ಹೆಸರಿನ ಮೂಲಕ ನೆಹರೂ ಕುಟುಂಬದ ಟಾರ್ಗೆಟ್ ಮಾಡುತ್ತಿದೆ ಎಂದು ಆರೋಪಿಸಿದರು.

ಮೋದಿಗೆ ಎರಡನೇ ಅವಧಿಯಲ್ಲೂ ಕಪ್ಪು ಹಣ ಹೊರತರಲು ಆಗಿಲ್ಲ. ಬದಲಾಗಿ ಗ್ಯಾಸ್, ಪೆಟ್ರೋಲಿಯಂನಲ್ಲಿ ಲೂಟಿ ಮಾಡಲು ಸರ್ಕಾರ ಮುಂದಾಗಿದೆ. ಮೋದಿ ಸರಕಾರ ಎರಡನೇ ಅವಧಿಯ ಸಾಧನೆ ಇದೇನಾ..? ಎಂದು ಮಾಜಿ ಸಚಿವ ರಮಾನಾಥ ರೈ ಪ್ರಶ್ನಿಸಿದರು.

Comments