ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಇಬ್ಬರಿಗೆ ಕೊರೊನಾ ದೃಢಮಂಗಳೂರು; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಇಬ್ಬರಿಗೆ ಕೊರೊನಾ ದೃಢಪಟ್ಟಿದೆ.
ಮಹಾರಾಷ್ಟ್ರದಿಂದ ಬಂದ ಓರ್ವ ಪುರುಷ ಮತ್ತು ರೋಗಿ ಸಂಖ್ಯೆ 4186 ಸಂಪರ್ಕ ಹೊಂದಿದ ಮಹಿಳೆಗೆ ಕೊರೊನಾ ದೃಢಪಟ್ಟಿದೆ.
ರೋಗಿ ಸಂಖ್ಯೆ 4186 ಸಂಪರ್ಕ ಹೊಂದಿದ ಮಹಿಳೆ  45 ವರ್ಷದವರಾಗಿದ್ದು ಇಂದು ಇವರ ಗಂಟಲು ದ್ರವ ಪರೀಕ್ಷೆ ವರದಿ ಪಾಸಿಟಿವ್ ಬಂದಿದೆ. ಮಹಾರಾಷ್ಟ್ರದಿಂದ ಬಂದ  33 ವರ್ಷದ ಯುವಕ ಕ್ವಾರಂಟೈನ್ ನಲ್ಲಿದ್ದು ಇಂದು ಕೊರೊನಾ ದೃಢಪಟ್ಟಿದೆ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಈವರೆಗೆ ದೃಢಪಟ್ಟ ಕೊರೊನಾ ಸೋಂಕಿತರ ಸಂಖ್ಯೆ 224 ಕ್ಕೆ ಏರಿಕೆಯಾಗಿದೆ.

Comments