ಮಂಗಳೂರಿನಲ್ಲಿ ಎರಡೂವರೆ ತಿಂಗಳ ಬಳಿಕ ರಸ್ತೆಗಿಳಿದ ಖಾಸಗಿ ‌ಬಸ್ ಗಳುಮಂಗಳೂರು; ಮಂಗಳೂರಿನಲ್ಲಿ ಎರಡೂವರೆ ತಿಂಗಳ ಬಳಿಕ ಖಾಸಗಿ ಬಸ್ ಗಳು ರಸ್ತೆಗಿಳಿದಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 200ಕ್ಕೂ ಅಧಿಕ ಖಾಸಗಿ ಬಸ್ ಗಳ ಸಂಚಾರ ಆರಂಭವಾಗಿದೆ.
ಮಂಗಳೂರಿನ ಸ್ಟೇಟ್ ಬ್ಯಾಂಕ್ ‌ಬಸ್ ನಿಲ್ದಾಣದಿಂದ ಸಂಚಾರ ಆರಂಭವಾಗಿದೆ. ಇನ್ನು ಅರ್ಧದಷ್ಟು ‌ಬಸ್ಸುಗಳು ನಾಳೆ ರಸ್ತೆಗಿಳಿಯಲಿದೆ. 15 ಶೇ. ಟಿಕೆಟ್ ‌ದರ ಹೆಚ್ಚಿಸಿ ಖಾಸಗಿ ಬಸ್ ಗಳ ಸಂಚಾರ ಆರಂಭಿಸಿದೆ.ಮಾಸ್ಕ್ ಹಾಕದೇ ಇದ್ದರೆ ಬಸ್ ಗಳಿಗೆ ಪ್ರಯಾಣಿಕರಿಗೆ ಪ್ರವೇಶ ನೀಡಲಾಗುತ್ತಿಲ್ಲ.50% ಪ್ರಯಾಣಿಕರನ್ನು ತುಂಬಿಸಿ ಬಸ್ ಸಂಚಾರ ಮಾಡಬಹುದಾಗಿದೆ.

ಎಲ್ಲಾ ಬಸ್ ಗಳನ್ನು ಸ್ಯಾನಿಟೈಝ್ ಮಾಡಿ ಸಂಚಾರ ಆರಂಭಿಸಲಾಗಿದ್ದುಬಸ್ ಗಳಲ್ಲಿ ಪ್ರತೀ ಪ್ರಯಾಣಿಕರಿಗೆ ಸ್ಯಾನಿಟೈಝರ್ ವ್ಯವಸ್ಥೆ ಮಾಡಲಾಗಿದೆ.ಮೊದಲ ದಿನವಾದ ಕಾರಣ ಬಸ್ ಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದಾರೆ

Comments