ಪೊಲೀಸ್ ಇಲಾಖೆ ವಾಹನಗಳ ಬಿಡಿಭಾಗಗಳ ಹರಾಜು



ಮಂಗಳೂರು :- ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಇಲಾಖೆಗೆ ಸೇರಿದ ಮೋಟಾರು ವಾಹನ ವಿಭಾಗದ 2019-20ನೇ ಸಾಲಿನ ನಿಷ್ಕ್ರಿಯಗೊಳಿಸಲಾದ ಹಳೆಯ ಬಿಡಿಭಾಗಗಳು, ಹಳೆಯ ಟಯರುಟ್ಯೂಬುಗಳು ಹಾಗೂ ಹಳೆಯ ಮಡ್ಡ್ ಆಯಿಲ್‍ಗಳ ಬಹಿರಂಗ ಹರಾಜು ಮೂಲಕ ವಿಲೇವಾರಿ ಜುಲೈ 9 ರಂದು ಬೆಳಿಗ್ಗೆ 11 ಗಂಟೆಗೆ  ದಕ್ಷಿಣ ಕನ್ನಡ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಆವರಣದಲ್ಲಿ ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲಾಗುವುದು.
    ನಿರುಪಯುಕ್ತ ವಸ್ತುಗಳ ವಿವರ:- ಹಳೆಯ ನಿಷ್ಕ್ರಿಯಗೊಳಿಸಲಾದ ಬಿಡಿ ಭಾಗಗಳ ಸಂಖ್ಯೆ - 419, ನಿಗದಿಗೊಳಿಸಿದ ಮೊತ್ತ ರೂ 16 ಸಾವಿರ, ಹಳೆಯ ಟಯರ್‍ಟ್ಯೂಬ್‍ಗಳು(ದ್ವಿಚಕ್ರ 12+12, ಲಘುವಾಹನ 170+110), ಸಂಖ್ಯೆ - 182+122, ನಿಗದಿಗೊಳಿಸಿದ ಮೊತ್ತ ರೂ 22 ಸಾವಿರ, ಹಳೆಯ ಮಡ್ಡ್ ಆಯಿಲ್ (ನಿರುಪಯುಕ್ತ ಆಯಿಲ್)360 ಲೀ, ನಿಗದಿಗೊಳಿಸಿದ ಮೊತ್ತ ರೂ 7.500 ಸಾವಿರ ಆಗಿದೆ.
   ಟೆಂಡರ್ ಅರ್ಜಿ ಸಲ್ಲಿಸಲು ಜುಲೈ 8 ರಂದು ಸಂಜೆ 5 ಗಂಟೆಯ ಕೊನೆಯ ದಿನವಾಗಿದೆ ಹೆಚ್ಚಿನ ಮಾಹಿತಿಗಾಗಿ ದಕ್ಷಿಣ ಕನ್ನಡ ಜಿಲ್ಲೆ ಪೊಲೀಸು ಅಧೀಕ್ಷಕ ಕಚೇರಿ ಸಂಪರ್ಕಿಸಲು  ಪ್ರಕಟಣೆ ತಿಳಿಸಿದೆ.

Comments