ಆಕಾಶಭವನದಲ್ಲಿ ಎರಡು ದಿನಗಳ ಶಟಲ್ ಬ್ಯಾಡ್ಮಿಂಟನ್ ಕ್ರೀಡಾಕೂಟಕ್ಕೆ ಚಾಲನೆ
ಮಂಗಳೂರು: ನಗರದ ಆಕಾಶಭವನ ಗೊಲ್ಲರಬೆಟ್ಟು ಮೈದಾನದಲ್ಲಿ ಎರಡು ದಿನಗಳ ಶಟಲ್ ಬ್ಯಾಡ್ಮಿಂಟನ್ ಕ್ರೀಡಾಕೂಟ ಆರಂಭವಾಗಿದೆ. ಜಿಲ್ಲಾ ಬಾಸ್ಕೆಟ್ ಬಾಲ್ ಫೆಡರೇಷನ್ ಅಧ್ಯಕ್ಷ ಹಾಗೂ ವಿ4 ನ್ಯೂಸ್ ಪ್ರಧಾನ ಸಂಪಾದಕರಾದ ಶ್ರೀ ಲಕ್ಷ್ಮಣ್ ಕುಂದರ್ ಪಂದ್ಯಾವಳಿಗೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಈಗಿನ ಯುವಜನರು ಮೊಬೈಲ್ ಮತ್ತಿತರ ವ್ಯವಸ್ಥೆಯಿಂದ ದಾರಿತಪ್ಪುತ್ತಿದ್ದು, ಸಮಾಜದ ಮುಖ್ಯವಾಹಿನಿಯಿಂದ ವಿಮುಖರಾಗುತ್ತಿದ್ದಾರೆ. ಯುವಕರು ಕ್ರೀಡೆ, ಸಾಂಸ್ಕೃತಿಕವಾಗಿ ತೊಡಗಿಸಿಕೊಳ್ಳುವಂತಾಗಬೇಕು. ಇದರಿಂದ ಹಲವು ಪ್ರತಿಭೆಗಳು ಬೆಳಕಿಗೆ ಬರುವಂತಾಗುತ್ತದೆ. ನಗರ ಪ್ರದೇಶದಲ್ಲಿ ಇಂತಹ ಕ್ರೀಡಾಕೂಟಗಳ ಆಯೋಜನೆ ಇಂದಿನ ಅಗತ್ಯವಾಗಿದೆ. ಇಂತಹ ಕ್ರೀಡಾಕೂಟಗಳಿಂದಲೇ ಹಲವು ಪ್ರತಿಭೆಗಳು ಬೆಳಕಿಗೆ ಬರಲಿದ್ದಾರೆ ಎಂದು ಶಟಲ್ ಬ್ಯಾಡ್ಮಿಂಟನ್ ಕ್ರೀಡಾಕೂಟಕ್ಕೆ ಶುಭಹಾರೈಸಿದರು.

ಚಿಂತನ ಸಾಂಸ್ಕೃತಿಕ ಬಳಗ ಮತ್ತು ಗೊಲ್ಲರಬೆಟ್ಟು ಬ್ಯಾಡ್ಮಿಂಟನ್ ಕ್ಲಬ್ ಜಂಟಿಯಾಗಿ ನಗರದ ಆಕಾಶಭವನದಲ್ಲಿ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಆಯೋಜಿಸಿದೆ.

ಎಂಟು ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದು, ಎರಡು ದಿನಗಳ ಕಾಲ ಈ ಕ್ರೀಡಾಕೂಟ ನಡೆಯಲಿದೆ. ಚಿಂತನ ಸಾಂಸ್ಕೃತಿಕ ಬಳಗದ ಇಸ್ಮಾಯಿಲ್, ಪ್ರೇಮನಾಥ್ ಮರ್ಣೆ, ನ್ಯಾಯವಾದಿ ಸುಕೇಶ್ ಕುಮಾರ್, ಎ.ಜೆ. ಆಸ್ಪತ್ರೆಯ ರಾಜೇಶ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Comments