ಆತ್ಮ‌ನಿರ್ಭರ ಭಾರತ", ಮೂಡುಗಿಳಿಯಾರಿನಲ್ಲಿ ಸಚಿವ ಕೋಟ ಮನೆ ಮನೆಗೆ‌


ಆತ್ಮ ನಿರ್ಭರ ಭಾರತದ ಕಲ್ಪನೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕರೆಯಂತೆ, ಸ್ವಾವಲಂಬಿ ಭಾರತದ ಯೋಜನೆ ಹಾಗೂ ಯೋಚನೆಯನ್ನು ಮನೆಮನೆಗೆ ತಲುಪಿಸುವ ಕಾರ್ಯಕ್ರಮದ ಅಂಗವಾಗಿ ಮಾನ್ಯ ಮುಜರಾಯಿ, ಮೀನುಗಾರಿಕೆ, ಬಂದರು,ಒಳನಾಡು ಜಲಸಾರಿಗೆ ಇಲಾಖೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ಇಂದು ಮೂಡುಗಿಳಿಯಾರಿನ ಗ್ರಾಮೀಣ ಪ್ರದೇಶದಲ್ಲಿ ಮನೆಮನೆಗೆ ಭೇಟಿ ನೀಡಿ ಪ್ರಧಾನ ಮಂತ್ರಿಯವರ ಪತ್ರ ಹಸ್ತಾಂತರಿಸಿ, ಸ್ವಾವಲಂಬಿ ಭಾರತದ ಕಲ್ಪನೆಗೆ ಎಲ್ಲರೂ ಒಟ್ಟಾಗಿ ಒಂದಾಗಿ ಶ್ರಮಿಸಬೇಕೆಂದು ಮನವಿ ಮಾಡಿಕೊಂಡರು. 

ಸಚಿವರ ಜೊತೆಯಲ್ಲಿ ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷರಾದ ಭರತ್ ಶೆಟ್ಟಿ ಗಿಳಿಯಾರು, ಹಿರಿಯ ಕಾರ್ಯಕರ್ತರಾದ ಸುರೇಂದ್ರ ಹೆಗ್ಡೆ ಗಿಳಿಯಾರು, ಪಂಚಾಯತ್ ಸದಸ್ಯರಾದ ರಾಜಾರಾಮ್ ಶೆಟ್ಟಿ, ಸಂತೋಷ್ ಪ್ರಭು, ರವಿ ಜೋಗಿ, ಚಂದ್ರ ಪೂಜಾರಿ ಹಾಗೂ ಗೋಪಾಲ್‌ ಪೈ, ರಮೇಶ ಹೇರ್ಳೆ ಉಪಸ್ಥಿತರಿದ್ದರು.

Comments