ಜೂನ್ 8ರಿಂದ ಫೋರಂ ಫಿಝಾ ಮಾಲ್ ಪುನಾರಂಭ : ಸ್ಯಾನಿಟೈಸರ್ ಹಾಕಿ ಸ್ವಚ್ಛತಾ ಕಾರ್ಯಮಂಗಳೂರು; ಕೊರೊನಾ ಲಾಕ್ಡೌನ್ ಬಳಿಕ ಮುಚ್ಚಲ್ಪಟ್ಟಿದ್ದ ಮಂಗಳೂರಿನ ಪಾಂಡೇಶ್ವರದಲ್ಲಿರುವ ಫಾರಂ ಫಿಝಾ ಮಾಲ್ ತೆರೆಯಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು, ಇಂದು ಸ್ಯಾನಿಟೈಸರ್ ಬಳಸಿ ಸ್ವಚ್ಚತಾ ಕಾರ್ಯ ಮತ್ತು ಮುಂಜಾಗ್ರತಾ ಕ್ರಮವಾಗಿ ಹಲವಾರು ಯೋಜನೆಗಳನ್ನು ರೂಪಸಿದ್ದಾರೆ.

ಕಳೆದ ಎರಡೂವರೆ ತಿಂಗಳಿಂದ ಕೊರೊನಾ ಮಹಾಮಾರಿಯಿಂದಾಗಿ ಮುಚ್ಚಿದ್ದ ಮಾಲ್ ಗಳನ್ನು ಓಪನ್ ಮಾಡಲು ರಾಜ್ಯ ಸರ್ಕಾರ ಅನುಮತಿಯನ್ನು ನೀಡಿದೆ. ಜೂನ್ ಎಂಟರಿಂದ ಮಂಗಳೂರಿನಲ್ಲಿ ಮಾಲ್ಗಳು ಪುನಾರಂಭಗೊಳ್ಳಲಿದೆ. ಇನ್ನು ಮುಂಜಾಗ್ರತಾ ಕ್ರಮವಾಗಿ ಮಂಗಳೂರಿನ ಫೋರಂ ಫಿಝಾ ಮಾಲ್ನಲ್ಲಿ ಸ್ಯಾನಿಟೈಸ್ ಫ್ಯೂಮಿಗೇಶನ್ ಅಳವಡಿಸಲಾಯಿತು.
ಇನ್ನು ಕ್ಯೂ ಆರ್ ಕೋಡ್ನಿಂದ ಫುಡ್ಕೋರ್ಟ್ನಲ್ಲಿ ಮನುಷ್ಯ ದೇಹ ಸಂಪರ್ಕವಿಲ್ಲದ ವ್ಯವಹಾರ ಕುಟುಂಬದವರೆಲ್ಲಾ ಸೇರಿ ತಿಂಡಿ ತಿನಿಸು ತಿನ್ನುವ ಮೇಜಿನ ವ್ಯವಸ್ಥೆ, ಸಾಮಾಜಿಕ ಅಂತರದ ಹಿನ್ನೆಲೆಯಲ್ಲಿ ವ್ಯವಹರಿಸುವ ಎಲ್ಲಾ ಕಾರ್ಯಕ್ರಮಗಳನ್ನು ಫೋರಂ ಒಳಗಿರುವ ಎಲ್ಲಾ ಅಂಗಡಿಗಳು ಕಾರ್ಯಪ್ರವೃತ್ತರಾಗಿದ್ದು ಅದಕ್ಕೆ ತ್ಕಕಂತೆ ಯೋಜನೆಯನ್ನು ಹಮ್ಮಿಕೊಂಡಿದ್ದಾರೆ. ಇವೆಲ್ಲವೂ ಕೂಡ ಅಪಾಯರಹಿತ ಯೋಜನೆಗಳಾಗಿ ಕಾರ್ಯ ಪ್ರವೃತ್ತವಾಗಲಿದೆ.
ಒಟ್ಟಿನಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಹಾಗೂ ಸಾಮಾಜಿಕ ಅಂತರ ಕಾಯ್ದುಕ್ಕೊಂದು ಬದುಕುವ ಬದಲಾದ ಜೀವನ ಶೈಲಿಗೆ ಅನುಗುಣವಾಗಿ ಆರೋಗ್ಯ ರಕ್ಷಣೆಯ ಹಿನ್ನೆಲೆಯಲ್ಲಿ ಫೋರಂ ಮಾಲ್ ಪುನಾರಂಭಗೊಳ್ಳಲಿದೆ.

Comments