ಕೊರೊನಾದಿಂದ ರಾಜ್ಯದ ದೇವಾಲಯಗಳಿಂದ 600 ಕೋಟಿ ನಷ್ಟ;ಸಚಿವ ಕೋಟ ಶ್ರೀನಿವಾಸ ಪೂಜಾರಿಮಂಗಳೂರು;ಕೋವಿಡ್ 19 ನಿಂದ ಲಾಕ್ ಡೌನ್ ಆದ ಪರಿಣಾಮ ರಾಜ್ಯದ ಮುಜರಾಯಿ ದೇವಲಾಯಗಳಲ್ಲಿ ಅಂದಾಜು 600 ಕೋಟಿ ನಷ್ಟವಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೊಲ್ಲೂರು ದೇವಾಲಯವೊಂದರಲ್ಲಿ ಎಪ್ರಿಲ್ ಮೇ ತಿಂಗಳಲ್ಲಿ14 ಕೋಟಿ ನಷ್ಟವಾಗಿದೆ ‌. ಎಲ್ಲಾ ದೇವಸ್ಥಾನ ಮುಚ್ಚಿದ ಪರಿಣಾಮ ಈ ನಷ್ಟವಾಗಿದೆ. ಎ ದರ್ಜೆ ಮತ್ತು ಬಿ ದರ್ಜೆ ದೇವಸ್ಥಾನಗಳಲ್ಲಿ ವಾರ್ಷಿಕ ಶೇಕಡ 35 ರಷ್ಟು ಆದಾಯ ಕಡಿಮೆಯಾಗಿದೆ ಎಂದು ತಿಳಿಸಿದರು.

Comments