ಸೊಸೆಯ ಮದುವೆ ಹಿನ್ನೆಲೆ : ಶ್ರೀಕರ್ ಪ್ರಭು ಅವರಿಂದ ಪಿ.ಎಂ. ಕೇರ್ ಫಂಡ್‌ಗೆ ರೂ.50,000 ದೇಣಿಗೆ


ಮಂಗಳೂರು : ನಗರದ ಖ್ಯಾತ ಉದ್ಯಮಿ ಹಾಗೂ ಸಮಾಜ ಸೇವಕ ಶ್ರೀಕರ್ ಪ್ರಭು ಅವರ ಸಹೋದರಿಯ ಮಗಳ ( ದಿವ್ಯಾ ಹಾಗೂ ರಾಕೇಶ್) ಮದುವೆ ಇತ್ತೀಚಿಗೆ ನಗರದ ಬಾಳಂಭಟ್ ಸಭಾಂಗಣದಲ್ಲಿ ಸರಳವಾಗಿ ನಡೆಯಿತು.

ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಸ್ಯಾನಿಟೈಸರ್, ಸಾಮಾಜಿಕ ಅಂತರ ಮೊದಲಾದ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಕೆಲವೆ ಮಂದಿ ಸಮ್ಮಂಧಿಕರ ಸಮ್ಮುಖದಲ್ಲಿ ನಡೆದ ಈ ಮದುವೆಯ   ಶುಭ ಸಂದರ್ಭದಲ್ಲಿ  ಶ್ರೀಕರ್ ಪ್ರಭು ಅವರು ಪ್ರಧಾನ ಮಂತ್ರಿಗಳ ಕೋವೀಡ್ ಪರಿಹಾರ ನಿಧಿ ( ಪಿ.ಎಂ. ಕೇರ್ ಫಂಡ್ ) ಗೆ ರೂ.50,000 ( ಐವತ್ತು ಸಾವಿರ) ವನ್ನು ದೇಣಿಗೆ ನೀಡುವ ಮೂಲಕ ತಮ್ಮ ಸೊಸೆಯ ಮದುವೆಯನ್ನು ವಿಶಿಷ್ಟ ರೀತಿಯಲ್ಲಿ ನೆರವೇರಿಸಿದರು.

Comments