ಮಂಗಳೂರಿನಲ್ಲಿ ಇಂದು 5 ಮಂದಿಗೆ ಕೊರೊನಾಮಂಗಳೂರು; ಮಂಗಳೂರಿನಲ್ಲಿ ಇಂದು  ಐವರಿಗೆ ಕೊರೋನ ಸೋಂಕು ತಗುಲಿರುವುದು ದೃಢಪಟ್ಟಿದೆ.

ಸೋಂಕಿತರಲ್ಲಿ ಮೂವರು ಸೌದಿ ಅರೇಬಿಯಾದಿಂದ , ಒಬ್ಬರು ಮಹಾರಾಷ್ಟ್ರ ದಿಂದ ಬಂದವರಾಗಿದ್ದಾರೆ. ಒಬ್ಬರಿಗೆ ಕೊರೊನಾ ಸೋಂಕಿತ ರೋಗಿಯ ಸಂಪರ್ಕದಿಂದ ಕೊರೊನಾ ದೃಢಪಟ್ಟಿದೆ.

ಸೋಂಕಿತರಲ್ಲಿ ಯುವಕನೋರ್ವ ಕಿಡ್ನಿ ಸಮಸ್ಯೆಯಿಂದ ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಕೊರೋನದಿಂದ ಮೃತಪಟ್ಟವರ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ.

ಸೌದಿ ಅರೇಬಿಯದಿಂದ ಜೂ.10ರಂದು ಆಗಮಿಸಿದ್ದ ಮೂವರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಇವರ ಗಂಟಲು ದ್ರವ ಮಾದರಿಯ ವರದಿಯಲ್ಲಿ ಸೋಂಕು ದೃಢಪಟ್ಟಿತ್ತು. ಪಿ-4526ರ ಪ್ರಾಥಮಿಕ ಸಂಪರ್ಕವುಳ್ಳವರಾಗಿದ್ದು, ಅವರಲ್ಲೂ ಕೊರೋನ ಪತ್ತೆಯಾಗಿದೆ.

ಇಲ್ಲಿಯವರೆಗೆ 153 ಮಂದಿ ಗುಣಮುಖರಾದಂತಾಗಿದೆ. ಸದ್ಯ 122 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ

Comments