ಸುನಿಲ್ ಬಜಿಲಕೇರಿ ವಿರುದ್ದ 5 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ ಶಾಸಕ ವೇದವ್ಯಾಸ ಕಾಮತ್ಮಂಗಳೂರು; ತನ್ನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ  ಅಪಪ್ರಚಾರ ಮಾಡುತ್ತಿರುವ ಸುನಿಲ್ ಬಜಿಲಕೇರಿ ವಿರುದ್ದ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಫೇಸ್‌ಬುಕ್‌ ಮತ್ತು ಇತರ ಸಾಮಾಜಿಕ ಮಾಧ್ಯಮದಲ್ಲಿ ಸುನಿಲ್ ಬಜಿಲಕೇರಿ ವೇದವ್ಯಾಸ ಕಾಮತ್ ನ್ನು ಭ್ರಷ್ಟ ಎಂದು ಪ್ರಚಾರ ಮಾಡುತ್ತಿದ್ದು   ಈ ಹಿನ್ನೆಲೆಯಲ್ಲಿ ಸುನಿಲ್ ಬಜಿಲಕೇರಿ ವಿರುದ್ದ 5 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಶಾಸಕರ ಪರವಾಗಿ ವಕೀಲ ಚಿದಾನಂದ ಕೆದಿಲಾಯ ಅವರು ವಾದಿಸಿದ್ದಾರೆ ‌
ಐದು ಕೋಟಿ ಪರಿಹಾರ ಮತ್ತು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡುವುದಕ್ಕೆ ಫಸ್ಟ್  ಸೀನಿಯರ್ ಸಿವಿಲ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದ್ದು ನ್ಯಾಯಾಲಯ ಇಂದು ಸುನಿಲ್ ಬಜಿಲಕೇರಿ ಶಾಸಕರ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುವುದಕ್ಕೆ ತಡೆಯಾಜ್ಞೆ ನೀಡಿದೆ.

Comments