ಆಟದ ವೇಳೆ ಗೇಟ್ ಕೌಂಪೌಂಡ್‌ ಕುಸಿದು 3 ವರ್ಷದ ಮಗು ದಾರುಣ ಸಾವು
ಮಂಗಳೂರು: ಗೇಟಿನಲ್ಲಿ ಆಟವಾಡುತ್ತಿದ್ದ ವೇಳೆ ಕೌಂಪೌಂಡ್ ಕುಸಿದು 3 ವರ್ಷದ ಮಗು ದಾರುಣವಾಗಿ ಮೃತಪಟ್ಟ ಘಟನೆ ಮಂಗಳೂರಿನ ಮುನ್ನೂರು ಗ್ರಾಮದ ಸಂತೋಷನಗರ ಮಸೀದಿ ಸಮೀಪ  ನಡೆದಿದೆ.

 ಅಶ್ರಫ್ ಆಯೇಷಾ ದಂಪತಿ ಪುತ್ರ ಐಮಾನ್( 3 ) ಮೃತಪಟ್ಟವರು. ಗೇಟ್ ನಲ್ಲಿ ಆಟವಾಡುತ್ತಿದ್ದಾಗ ಇದಕ್ಕಿದ್ದಂತೆ ಕೌಂಪೌಂಡ್ ಗೋಡೆ ಕುಸಿದಿದ್ದು ತಡೆಗೋಡೆಯ ಅಡಿ ಮಗು ಸಿಲುಕಿ ಮೃತಪಟ್ಟಿದೆ.

Comments