ದ.ಕ ಜಿಲ್ಲೆಯಲ್ಲಿ ಇಂದು 33 ಮಂದಿಗೆ ಕೊರೊನಾ ದೃಢ


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ 33 ಮಂದಿಗೆ ಕೋವಿಡ್ -19 ದೃಢಪಟ್ಟಿದೆ. ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 500ರ ಗಡಿ ದಾಟಿದ್ದು, 526ಕ್ಕೆ ಏರಿಕೆಯಾಗಿದೆ.
ಶುಕ್ರವಾರದ 33 ಪ್ರಕರಣಗಳ ಪೈಕಿ 15 ಮಂದಿ ವಿದೇಶದಿಂದ ಆಗಮಿಸಿದವರು, 10 ಮಂದಿಗೆ ಕೊರೋನಾ ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ ಸೋಂಕು ಹರಡಿದೆ. ಉಸಿರಾಟ ಸಮಸ್ಯೆ ಇರುವ ಇಬ್ಬರಿಗೆ, ಶೀತ ಜ್ವರದ ಲಕ್ಷಣ ಇರುವ ನಾಲ್ವರಿಗೆ, ಉಡುಪಿ ಪ್ರವಾಸ ಹಿನ್ನೆಲೆಯ ಒಬ್ಬರಿಗೆ ಸೋಂಕು ಒತ್ತೆಯಾಗಿದೆ. ಇನ್ನೊಬ್ಬರ ಸೋಂಕಿನ ಮೂಲ ಪತ್ತೆಹಚ್ಚಲಾಗುತ್ತಿದೆ.
ವಿದೇಶದಿಂದ ಆಗಮಿಸಿದವರ ಪೈಕಿ 5 ಮಂದಿ ಸೌದಿ ಅರೇಬಿಯಾದಿಂದ ಬಂದಿದ್ದರೆ, ಕತಾರ್‌ನಿಂದ ಆಗಮಿಸಿದ ಆರು ಮಂದಿ, ದಮಾಮ್‌ನಿಂದ ಬಂದ ನಾಲ್ವರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಮೂಲ ಪತ್ತೆಯಾಗದ ಉಸಿರಾಟ ಸಮಸ್ಯೆ, ಶೀತ ಜ್ವರ ಲಕ್ಷಣ ಉಳ್ಳವರಲ್ಲಿ ಪರೀಕ್ಷೆ ನಡೆಸಿದಾಗ ಕೊರೋನಾ ಪತ್ತೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ

Comments