ಕರಾವಳಿ ಮೀನುಗಾರಿಕೆ: ಜೂನ್ 30ರಂದು ಸಭೆ



ಮಂಗಳೂರು :- ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ  ಜೂನ್ 30 ರಂದು ಬೆಳಿಗ್ಗೆ 10.30 ಗಂಟೆಗೆ ಮಂಗಳೂರು ಮಹಾನಗರಪಾಲಿಕೆ ಮಂಗಳಾ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
    ಸಭೆಯಲ್ಲಿ ಕರಾವಳಿ ಮೀನುಗಾರಿಕೆ ಬಗ್ಗೆ ಹಾಗೂ ಭವಿಷ್ಯದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಕರಾವಳಿ ಭಾಗದ ಶಾಸಕರು, ವಿಷಯ ತಜ್ಞರು, ಮೀನುಗಾರ ಮುಖಂಡರು, ಇಲಾಖೆಯ ನಿವೃತ್ತ ಅಧಿಕಾರಿಗಳು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಲು ನಡೆಯಲಿದೆ ಎಂದು  ಮೀನುಗಾರಿಕೆ ಇಲಾಖೆ ಪ್ರಕಟಣೆ ತಿಳಿಸಿದೆ.

Comments