ಕೊರೊನಾಗೆ ದ.ಕ ಜಿಲ್ಲೆಯಲ್ಲಿ ಒಂದೇ ದಿನ ಮೂವರು ಬಲಿ


ಮಂಗಳೂರು; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ವೈರಸ್ ಹಾವಳಿಗೆ ಒಂದೇ ದಿನ ಮೂವರು ಮೃತಪಟ್ಟಿದ್ದಾರೆ.

ಇಂದು ಬೆಳಗ್ಗೆ ಸುರತ್ಕಲ್ ನಿವಾಸಿ 31ರ ಹರೆಯದ ಯುವಕ ಹಾಗೂ ಬಂಟ್ವಾಳ ನಿವಾಸಿ ವೃದ್ಧೆ ಮೃತಪಟ್ಟಿದ್ದರು. ಮಧ್ಯಾಹ್ನದ ವೇಳೆಗೆ ಸುರತ್ಕಲ್ ಸಮೀಪದ ಜೋಕಟ್ಟೆ ನಿವಾಸಿ 51ರ ಹರೆಯದ ಮಹಿಳೆ ಮೃತರಾಗಿದ್ದಾರೆ.

 ಜೋಕಟ್ಟೆ ಸಮೀಪದ ನಿವಾಸಿ ಮಹಿಳೆ ಟಿಬಿ ಖಾಯಿಲೆಯಿಂದ ಬಳಲುತ್ತಿದ್ದು ಅದಕ್ಕಾಗಿ ಸುರತ್ಕಲ್ ಕಾನ ಬಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಅಲ್ಲಿ ಆರೋಗ್ಯ ತೀರಾ ಹದಗೆಟ್ಟ ಕಾರಣ ಜೂ. 26ರ ಸಂಜೆ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿ ಪರೀಕ್ಷೆ ವೇಳೆ ಕೊರೋನಾ ಸೋಂಕು ಪತ್ತೆಯಾಗಿತ್ತು

Comments