ಮಂಗಳೂರಿಗೆ ಆಗಮಿಸಿದ ಎಕ್ಸ್‌ಪರ್ಟೈಸ್ ಕಂಪೆನಿಯ 2ನೇ ಬಾಡಿಗೆ ವಿಮಾನ


ಮಂಗಳೂರು: ಕೊರೋನ-ಲಾಕ್‌ಡೌನ್‌ನಿಂದಾಗಿ ಸೌದಿ ಅರೇಬಿಯಾದಲ್ಲಿ ಅತಂತ್ರರಾಗಿದ್ದ ತಮ್ಮ ಕಂಪೆನಿಯ ಉದ್ಯೋಗಿಗಳು ಹಾಗೂ ಅನಿವಾಸಿ ಕನ್ನಡಿಗರಿಗಾಗಿ ಎಕ್ಸ್‌ಪರ್ಟೈಸ್ ಕಂಪೆನಿಯು ದಮಾಮ್‌ನಿಂದ ಕಳುಹಿಸಿಕೊಟ್ಟ ವಿಶೇಷ ಬಾಡಿಗೆ ವಿಮಾನವು ಇಂದು  ಸಂಜೆ 7:30ರ ವೇಳೆಗೆ ಮಂಗಳೂರು ತಲುಪಿತು. 170 ಪ್ರಯಾಣಿಕರು ತಾಯ್ನಾಡಿಗೆ ಮರಳಿದ್ದಾರೆ.

ಜೂ.7ರಂದು ಎಕ್ಸ್‌ಪರ್ಟೈಸ್ ಕಂಪೆನಿಯ ಮೊದಲ ಬಾಡಿಗೆ ವಿಮಾನವು ಮಂಗಳೂರಿಗೆ ಆಗಮಿಸಿತ್ತು. ಅದರಲ್ಲಿ 168 ಪ್ರಯಾಕರಿದ್ದರು. ಇವರೆಲ್ಲರೂ ಎಕ್ಸ್‌ಪರ್ಟೈಸ್ ಕಂಪೆನಿಯ ಅತಂತ್ರ ಸ್ಥಿತಿಯಲ್ಲಿದ್ದ ಉದ್ಯೋಗಿಗಳಾಗಿದ್ದರು. ಗುರುವಾರ ಮಧ್ಯಾಹ್ನ ದಮಾಮ್ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ಎರಡನೇ ಬಾಡಿಗೆ ವಿಮಾನದಲ್ಲಿ ಕಂಪೆನಿಯ ಹೊರತಾದ 70 ಪ್ರಯಾಕರಿದ್ದರು. ಅದರಲ್ಲಿ ಹಿರಿಯರು, ಗರ್ಭಿಣಿಯರು, ಎಳೆಯ ಮಕ್ಕಳು ಸೇರಿದ್ದರು. ಎಲ್ಲರನ್ನೂ ನಗರದ ಹೊಟೇಲ್‌ನಲ್ಲಿ ಕ್ವಾರಂಟೈನ್‌ಗೊಳಪಡಿಸಲಾಗಿದೆ.

Comments