ದ.ಕ ಜಿಲ್ಲೆಯಲ್ಲಿ ಇಂದು ಕೊರೊನಾ ದೃಢಪಟ್ಟ 24 ಮಂದಿಯಲ್ಲಿ 6 ಮಂದಿ ವಿಮಾನಯಾನ ಸಿಬ್ಬಂದಿಗಳುಮಂಗಳೂರು; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಕೊರೊನಾ ದೃಢಪಟ್ಟ 24 ಮಂದಿಯಲ್ಲಿ 6 ಮಂದಿ ವಿಮಾನಯಾನ ಸಿಬ್ಬಂದಿಗಳಾಗಿದ್ದಾರೆ.
ಜೂನ್‌ 3 ರಂದು ಈ ಆರು ಮಂದಿ  ದುಬಾಯಿನಿಂದ ಕೇರಳದ ಕಣ್ಣೂರಿಗೆ ಆಗಮಿಸಿದ್ದರು. ಬಳಿಕ ಮಂಗಳೂರಿಗೆ ಆಗಮಿಸಿ  ಖಾಸಗಿ ಹೋಟೆಲ್ ನಲ್ಲಿ  ಕ್ವಾರಂಟೈನ್ ನಲ್ಲಿದ್ದರು. ಇಂದು ಇವರಿಗೆ ಕೊರೊನಾ ದೃಢಪಟ್ಟಿದೆ. ಆರು ಮಂದಿಯಲ್ಲಿ ಐದು ಮಂದಿ 36, 37, 31, 33,24 ವರ್ಷದ ಪುರುಷರು ಮತ್ತು 35 ವರ್ಷದ ಮಹಿಳೆಯಾಗಿದ್ದಾರೆ.  ಇನ್ನು ಮಂಗಳೂರಿನ ಎನ್ ಎಂ ಪಿ ಟಿ ಹಡಗು ನಿರ್ಮಾಣ  ಸಿಬ್ಬಂದಿಗೂ ಕೊರೊನಾ ದೃಢಪಟ್ಟಿದೆ.

Comments