ಯುವಕನಿಂದ ಪೋಸ್ಟ್ ಮ್ಯಾನ್‌ ಮೇಲೆ ಹಲ್ಲೆ


ಮಂಗಳೂರು:ಅಶೋಕನಗರ ಪೋಸ್ಟ್ ಮ್ಯಾನ್ ಮೇಲೆ ಯುವಕನೊಬ್ಬ ರಾಡ್ ನಿಂದ ಹಲ್ಲೆ ಮಾಡಿ ಕಾಗದ ಪತ್ರಗಳನ್ನು ಎಸೆದ ಘಟನೆ ಮಂಗಳೂರು ನಗರದ ಮಠದಕಣಿ ಬಳಿ ನಡೆದಿದೆ. 

  ಕೋಟೆಕಾರ್ ನಿವಾಸಿ ದಿನೇಶ್
ಗಾಯಗೊಂಡ ಪೋಸ್ಟ್ ಮ್ಯಾನ್ . ಇವರಿಗೆ ಮನೀಶ್ ಎಂಬಾತ ಹಲ್ಲೆ ಮಾಡಿದ್ದಾನೆ.  ದಿನೇಶ್ ಕಳೆದ 19 ವರ್ಷಗಳಿಂದ ಅಶೋಕನಗರ ಅಂಚೆ ಕಚೇರಿ ಪೋಸ್ಟ್ ಮ್ಯಾನ್ ಆಗಿದ್ದಾರೆ. ಕಚೇರಿಯಿಂದ ಕಾಗದ ಬಟವಾಡೆ ಮಾಡಲು ತೆರಳಿದ್ದಾಗ ಮಠದಕಣಿ ನಿವಾಸಿ ಮನೀಶ್ ಗೆ ರಿಜಿಸ್ಟರ್ ಕಾಗದ ಬಂದಿದ್ದು ಅದನ್ನು ಕೊಡಲು ಹೋದಾಗ ಕೆಟ್ಟ ಭಾಷೆ ಪ್ರಯೋಗಿಸಿ ಬೈದಿದ್ದಲ್ಲದೆ ರಾಡ್ ಹಿಡಿದು ಹೊರಬಂದು ಏಕಾಏಕಿ ಹಲ್ಲೆ ಮಾಡಿದ್ದಾನೆ. ಈ ಕುರಿತು ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments