ಜೂ. 21ರಂದು ಧರ್ಮಸ್ಥಳಕ್ಕೆ ಬರುವುದಿದ್ದರೆ ಈ ಸುದ್ದಿ ನೋಡಿ


ಮಂಗಳೂರು: ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನಕ್ಕೆ ರಾಜ್ಯ‌ಹೊರರಾಜ್ಯಗಳಿಂದ ಭಕ್ತರು ಬರುತ್ತಲೆ ಇರುತ್ತಾರೆ. ಮೊದಲೆ ಯೋಚಿಸಿ ಪ್ರಯಾಣ ಮಾಡುವವರು ಜೂ. 21 ರಂದು ಧರ್ಮಸ್ಥಳ ದೇವರ ದರ್ಶನ ಮಾಡಲು ಬರುವುದಿದ್ದರೆ ಈ ಸುದ್ದಿ ಗಮನಿಸಿ

ಈ ವರ್ಷದ ಮೊದಲ ಸೂರ್ಯಗ್ರಹಣ ನಡೆಯುವ ಜೂ. 21ರಂದು ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಬೆಳಗ್ಗೆ 9ರಿಂದ ಸಂಜೆ 4ರವರೆಗೆ ದೇವರ ದರ್ಶನಕ್ಕೆ ಅವಕಾಶವಿರುವುದಿಲ್ಲ.ಜೂ.21ರ ಬೆಳಗ್ಗೆ 5.30ರಿಂದ 9ರ ವರೆಗೆ ಮಾತ್ರ ದೇವರ ದರ್ಶನ ಅವಕಾಶವಿದೆ. ಬೆಳಗ್ಗೆ 6ಕ್ಕೆ ದೇವರಿಗೆ ಅಭಿಷೇಕ ಪ್ರಾರಂಭಗೊಂಡು 9.30ಕ್ಕೆ ಮಹಾಪೂಜೆ ಜರುಗಲಿದೆ. ಆ ಬಳಿಕ ಸಂಜೆ 4 ಗಂಟೆಗೆ ದೇವಸ್ಥಾನ ಬಾಗಿಲು ತೆರಯಲಿದ್ದು ರಾತ್ರಿ 8.30ರ ವರೆಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.

Comments