ದ.ಕ ಜಿಲ್ಲೆಯಲ್ಲಿ ಇಂದು 2 ಕೊರೊನಾ ಪ್ರಕರಣ ಪತ್ತೆಮಂಗಳೂರು; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಎರಡು ಕೊರೊನಾ ಪ್ರಕರಣಗಳು ದೃಢಪಟ್ಟಿದೆ.
ಮಹಾರಾಷ್ಟ್ರದಿಂದ ಬಂದ ಇಬ್ಬರು ಪುರುಷರಿಗೆ ಕೊರೊನಾ ದೃಢಪಟ್ಟಿದೆ.  25 ಮತ್ತು 36 ವಯಸ್ಸಿನ ಇವರು ಇತ್ತೀಚೆಗೆ ಮಹಾರಾಷ್ಟ್ರದಿಂದ ಆಗಮಿಸಿದ್ದರು. ಕ್ಬಾರಂಟೈನ್ ನಲ್ಲಿದ್ದ ಇಬ್ಬರಿಗೆ ಇಂದು ಕೊರೊನಾ ದೃಢಪಟ್ಟಿದ್ದು ಮಂಗಳೂರಿನ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೆ 139 ಪ್ರಕರಣಗಳು ದೃಢಪಟ್ಟಿದ್ದು  63 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ

Comments