2 ತಿಂಗಳ ಲಾಕ್‌ ಡೌನ್ ಬಳಿಕ ಭಕ್ತರ ಪ್ರವೇಶಕ್ಕೆ ತೆರವಾದ ಕುದ್ರೋಳಿ: ಜೂ. 8 ರಂದು ಬೆಳಗ್ಗೆ ಧನ್ವಂತರಿಯಾಗ ಹಾಗೂಶತಸೀಯಾಳಾಭಿಷೇಕ

ಮಂಗಳೂರು: 
 ಎರಡೂವರೆ ತಿಂಗಳ ಸುಧೀರ್ಘ ಲಾಕ್‌ ಡೌನ್ ನಂತರ ಜೂ.8ರಂದು ಮಂಗಳೂರು ದಸರಾ ನಡೆಯುವ ಖ್ಯಾತ ದೇವಾಲಯ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ತೆರೆಯಲಿದ್ದು, ಭಕ್ತರಿಗಾಗಿ ತೆರೆದುಕೊಳ್ಳಲಿದ್ದು,

ದೇವರ ದರ್ಶನಕ್ಕೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.
ಬೆಳಗ್ಗೆ 8.30ರಿಂದ ಲೋಕಕಲ್ಯಾಣಾರ್ಥ ಹಾಗೂ ಕೊರೊನಾ ಮಹಾಮಾರಿ ಮುಕ್ತಿಗಾಗಿ ಧನ್ವಂತರಿಯಾಗ ನಡೆಯಲಿದೆ.

ಮಧ್ಯಾಹ್ನ 11.30ಕ್ಕೆ ಗಂಟೆಗೆ ಗೋಕರ್ಣನಾಥ ದೇವರಿಗೆ ಶತ ಸೀಯಾಳಾಭಿಷೇಕ ನಡೆಯಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

Comments