ಡಾ.ಮುರಳೀ ಮೋಹನ್ ಚೂಂತಾರು ಅವರ ಕೋವಿಡ್ 19 ಬಗ್ಗೆ ಮಾಹಿತಿ ನೀಡುವ ಪುಸ್ತಕ ಬಿಡುಗಡೆಮಂಗಳೂರು; ಖ್ಯಾತ ವೈದ್ಯ, ಸಾಹಿತಿ , ಬಾಯಿ, ಮುಖ ದವಡೆ ಶಸ್ತ್ರಚಿಕಿತ್ಸಕರಾದ ಡಾ. ಮುರಳೀ ಮೋಹನ್ ಚೂಂತಾರು ಅವರ ಹನ್ನೊಂದನೆಯ ಕೃತಿ ಸಂಕಲ್ಪ-2020 ಕೋವಿಡ್ 19 ಆರೋಗ್ಯ ಮಾರ್ಗದರ್ಶಿ ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಬಿಡುಗಡೆಗೊಂಡಿತು.

ಕೊರೊನಾ ಗುಂಪಿನ ವೈರಾಣುವಿನಿಂದ ಹರಡುವ ಈ ಕೋವಿಡ್-19 ರೋಗವನ್ನು ಗುರುತಿಸುವುದು ಹೇಗೆ, ತಡೆಗಟ್ಟುವುದು ಹೇಗೆ ಮತ್ತು ಬಾರದಂತೆ ಹೇಗೆ ಮುನ್ನೆಚ್ಚರಿಕೆ ವಹಿಸಬೇಕು ಚಿಕಿತ್ಸೆಯ ಬಗ್ಗೆ ಮಾಹಿತಿ ಇರುವ ಪುಸ್ತಕ ಇದಾಗಿದ್ದು, ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೊರೊನಾದಿಂದ ನಾವು ಹೇಗೆ ಪಾರಾಗಬಹುದು ಎಂಬ ಬಗ್ಗೆ ಸುಲಭವಾಗಿ ಆರ್ಥವಾಗುವ ರೀತಿಯಲ್ಲಿ ಸುಂದರವಾದ ಪುಸ್ತಕ ಸಂಕಲ್ಪ-2020ನ್ನು ಡಾ. ಮುರಳೀ ಮೋಹನ್ ಚೂಂತಾರು ಬರೆದಿದ್ದಾರೆ. ಕೋವಿಡ್ ಮುಂಜಾಗ್ರತಾ ಕ್ರಮವಾಗಿ ಎಲ್ಲರೂ ಜಾಗೃತರಾಗಿದ್ದಾರೆ. ಈ ಪುಸ್ತಕವನ್ನು ಓದಿ ಇನ್ನೂ ಜಾಗೃತರಾಗಬೇಕು ಎಂದು ಹೇಳಿದರು.
ಆನಂತರ ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ಅವರು ಮಾತನಾಡಿ, ಕಳೆದ ಹತ್ತು ವರ್ಷದಿಂದ ಡಾ. ಮುರಳೀ ಮೋಹನ್ ಚೂಂತಾರು ಅವರು, ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಕೊಂಡ ವೈದ್ಯಕೀಯ ವೃತ್ತಿಯಲ್ಲೂ ತೊಡಗಿಸಿಕೊಂಡಿರುವುದು ಅಭಿನಂದನೀಯ ಎಂದರು.
ಈ ಸಂದರ್ಭದಲ್ಲಿ ಡಾ. ಮುರಳೀ ಮೋಹನ್ ಚೂಂತಾರು, ಕರ್ನಾಟಕ ವೈದ್ಯಕೀಯ ಪರಿಷತ್‌ ನ ಡಾ. ಜಿ.ಕೆ. ಭಟ್ ಉಪಸ್ತಿತರಿದ್ದರು.

Comments