ಮಂಗಳೂರಲ್ಲಿ ಪಾದಯಾತ್ರೆ ಮೂಲಕ ಕೋವಿಡ್ -19 ಮಾಸ್ಕ್ ದಿನಮಂಗಳೂರು;ಕೊರೋನ ನಿಗ್ರಹದ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ಸೂಚನೆಯಂತೆ ದಕ್ಷಿಣ ಕನ್ನಡ
ಜಿಲ್ಲಾಡಳಿತ ಮತ್ತು ಮಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ಮಂಗಳೂರಲ್ಲಿ ಪಾದಯಾತ್ರೆ ಮೂಲಕ ಕೋವಿಡ್ -19 ಮಾಸ್ಕ್ ದಿನ ಆಚರಿಸಲಾಯಿತು.
ನಗರದ ವಿವಿಧ ಕಡೆ ಸರಕಾರಿ ಅಧಿಕಾರಿಗಳು, ಸಿಬ್ಬಂದಿ ವರ್ಗ ಮತ್ತು ಜನಪ್ರತಿನಿಧಿಗಳು ಪಾದಯಾತ್ರೆ ನಡೆಸಿ ಮಾಸ್ಕ್ ಧರಿಸಬೇಕು, ಸುರಕ್ಷಿತ ಅಂತರ ಕಾಪಾಡ ಬೇಕು, ಸ್ಯಾನಿಟೈಸರ್ ಬಳಕೆ ಮಾಡಬೇಕು, ಶುಚುತ್ವಕ್ಕೆ ಆದ್ಯತೆ ನಡೆಸಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು. ದಕ್ಷಿಣ ಕನ್ನಡ
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಪಾದಯಾತ್ರೆಗೆ ಚಾಲನೆ ನೀಡಿದರೆ, ಮನಪಾ ಕಚೇರಿ ಮುಂದೆ ಮೇಯರ್ ದಿವಾಕರ ಪಾಂಡೇಶ್ವರ ಚಾಲನೆ ನೀಡಿದರು.

Comments