17 ವರ್ಷದ ಯುವತಿ ನಾಪತ್ತೆ


ಮಂಗಳೂರು :- ಯುವತಿ ನಾಪತ್ತೆಯಾಗಿರುವ ಬಗ್ಗೆ ಮಂಗಳೂರು ಪೂರ್ವ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    ಜೂನ್ 13ರಂದು  ಶ್ಯಾರೆಲ್ (17) ಎಂಬ ಯುವತಿ ರಾತ್ರಿ 11 ಗಂಟೆಗೆ ತನ್ನ ಮನೆಯಿಂದ ಹೊರಗೆ ಹೋಗಿ ಬರುತ್ತೇನೆ ಎಂದು ತಿಳಿಸಿ ಹೋದವಳು ವಾಪಾಸ್ಸು ಮನೆಗೆ ಬಾರದೆ ಕಾಣೆಯಾಗಿದ್ದಾಳೆ.
   ಕಾಣೆಯಾದ ಯುವತಿಯ ಚಹರೆ ಇಂತಿವೆ:- ಎತ್ತರ 5.2,  ಬಿಳಿ ಬಣ್ಣ, ದುಂಡು ಮುಖ, ಬೆಕ್ಕು ಕಣ್ಣು, ಕೆಂಪು ಕೂದಲು ಧರಿಸಿರುವ ಬಟ್ಟೆ-ಹಳದಿ ಕಲರ್ ಟಿ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್. ಮಾತನಾಡುವ ಭಾಷೆ-ಕನ್ನಡ, ತುಳು.
   ಕಾಣೆಯಾದ ಯುವತಿಯ ಬಗ್ಗೆ ಮಾಹಿತಿ ದೊರಕಿದ್ದಲ್ಲಿ ಮಂಗಳೂರು ಪೂರ್ವ ಪೆÇಲೀಸ್ ಠಾಣೆ ದೂರವಾಣಿ ಸಂಖ್ಯೆ 2220520, 2220800-2220801 ನ್ನು ಸಂಪರ್ಕಿಸಲು ಠಾಣಾಧಿಕಾರಿ ಪ್ರಕಟಣೆ ತಿಳಿಸಿದೆ.

Comments