ಎಸ್.ಎಸ್.ಎಲ್.ಸಿ. ಪರೀಕ್ಷೆ; ದ.ಕ ಜಿಲ್ಲೆಯಲ್ಲಿ 1658 ವಿದ್ಯಾರ್ಥಿಗಳು ಗೈರು


ಮಂಗಳೂರು :- ಎಸ್.ಎಸ್.ಎಲ್.ಸಿ. ಪರೀಕ್ಷೆ ಗುರುವಾರ ಆರಂಭವಾಗಿದ್ದು, ಮೊದಲ ದಿನ ದ್ವಿತೀಯ ಭಾಷೆ ಪರೀಕ್ಷೆ ನಡೆಯಿತು.
   ಇಂದಿನ ಪರೀಕ್ಷೆಗೆ 29,032 ವಿದ್ಯಾರ್ಥಿಗಳು ನೊಂದಣಿ ಆಗಿದ್ದು, ಒಟ್ಟು 27,374 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 1658 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ  ಇಲಾಖೆಯ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.

Comments