ದ.ಕ ಜಿಲ್ಲೆಯಲ್ಲಿ ಇಬ್ಬರು ಪಾಸಿಟಿವ್ ರೋಗಿಗಳು ಸೇರಿದಂತೆ 15 ಮಂದಿ ಡಿಸ್ಚಾರ್ಜ್!


ಮಂಗಳೂರು: ದ.ಕ. ಜಿಲ್ಲೆಯಲ್ಲಿ ಶನಿವಾರ ನಾಲ್ವರಿಗೆ ಕೊರೋನ ಸೋಂಕು ತಗುಲಿದೆ. ಇದೇ ವೇಳೆ 15 ಮಂದಿ ಡಿಸ್ಚಾರ್ಜ್ ಆಗಿದ್ದು ಇದರಲ್ಲಿ ಇಬ್ಬರು ಕೊರೊನಾ ಪಾಸಿಟಿವ್ ರೋಗಿಗಳು ಇದ್ದಾರೆ.

 ಸೋಂಕಿತರ ಪೈಕಿ 13 ಮಂದಿ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಮರಳಿದ್ದಾರೆ.81 ಹಾಗೂ 76 ವರ್ಷದ ವೃದ್ಧರನ್ನು ‘ಕೋವಿಡ್-19 ಟೆಕ್ನಿಕಲ್ ಅಡ್ವೈಸರಿ ಕಮಿಟಿ ಬೆಂಗಳೂರು’ ಇವರ ತೀರ್ಮಾನದಂತೆ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ.
ಈ ಇಬ್ಬರು ವೃದ್ದರು ಒಂದು ತಿಂಗಳು ಒಂದು ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದರೂ ಇವರು ಗುಣಮುಖರಾಗಿರಲಿಲ್ಲ. ಏಳು ಬಾರಿ ಇವರ ಟೆಸ್ಟ್ ಪಾಸಿಟಿವ್ ಬಂದಿತ್ತು. ಈ ಕಾರಣದಿಂದ  ಟೆಕ್ನಿಕಲ್ ಅಡ್ವೈಸರಿ ಕಮಿಟಿ ತೀರ್ಮಾನದಂತೆ ಮನೆಗೆ ಕಳುಹಿಸಲಾಗಿದೆ

Comments