ಮಂಗಳೂರಿನಲ್ಲಿ 13 ವರ್ಷದ ಬಾಲಕಿ ಸೇರಿದಂತೆ ಐವರು ಕೊರೊನಾ ಸೋಂಕಿತರು ಗುಣಮುಖ


ಮಂಗಳೂರು;   ಮಂಗಳೂರಿನಲ್ಲಿ ಕೊರೊನಾ ಸೋಂಕಿತರಾಗಿ ಚಿಕಿತ್ಸೆ ಪಡೆಯುತ್ತಿದ್ದ ಐದು ಮಂದಿ ಗುಣಮುಖರಾಗಿದ್ದಾರೆ.

ಐದು ವರ್ಷದ ಬಾಲಕಿ ಸೇರಿದಂತೆ ಐವರು ಗುಣಮುಖರಾಗಿದ್ದಾರೆ. ರೋಗಿ ಸಂಖ್ಯೆ 2474( 25 ವರ್ಷ), 2861 (54ವರ್ಷ), 3202 (30ವರ್ಷ),  5075(13 ವರ್ಷ), 5083 (49 ವರ್ಷ) ಗುಣಮುಖರಾದವರು. ಇದರಲ್ಲಿ ನಾಲ್ವರು ಗಂಡಸರು , ಒಬ್ಬಳು ಬಾಲಕಿಯಾಗಿದ್ದಾಳೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಒಟ್ಟು 192 ಪ್ರಕರಣ ದಾಖಲಾಗಿದ್ದು  ಇದರಲ್ಲಿ 96 ಮಂದಿ ಗುಣಮುಖರಾಗಿದ್ದಾರೆ.  7 ಮಂದಿ ಸಾವನ್ನಪ್ಪಿದ್ದು 89 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ

Comments