ಪಾಣೆಮಂಗಳೂರು ಹಳೆ ಸೇತುವೆ ಬಳಿ ಮೃತದೇಹ ಪತ್ತೆ


ಮಂಗಳೂರು:  ಪಾಣೆಮಂಗಳೂರು ಹಳೆ ಸೇತುವೆ ಬಳಿ ಮೃತದೇಹವೊಂದು ಇಂದು ಬೆಳಗ್ಗೆ ಪತ್ತೆಯಾಗಿದೆ.

ಇತ್ತೀಚೆಗೆ ನದಿಗೆ ಹಾರಿದ ಯುವಕನನ್ನು ರಕ್ಷಿಸಿದ ನೇತ್ರಾವತಿ ವೀರರ ತಂಡದ ಸದಸ್ಯರು  ಅದನ್ನು ದಡಕ್ಕೆ ತಂದಿದ್ದಾರೆ. 

ಮೃತದೇಹದ ಪರ್ಸ್ ನಲ್ಲಿದ್ದ ದಾಖಲೆಗಳಲ್ಲಿ ಬೆಂಗಳೂರು ಪೀಣ್ಯ ಎಂ.ಇ.ಸಿ. ಲೇಔಟ್ ನ ದುಗ್ಗಲಮ್ಮ ದೇವಸ್ಥಾನ ಬಳಿ ನಿವಾಸಿ ಮುನಿಯಪ್ಪ ಎಂಬವರ ಪುತ್ರ ಶ್ರೀನಿವಾಸ (32) ಎಂದು ನಮೂದಾಗಿದ್ದು ಈ ನಿಟ್ಟಿನಲ್ಲಿ ಗುರುತು ಪತ್ತೆಹಚ್ಚುವ ಕಾರ್ಯ ಸಾಗಿದೆ. ಬಂಟ್ವಾಳ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Comments