ಖಾಸಗಿ ಕೋವಿಡ್ ಟೆಸ್ಟ್ ಲ್ಯಾಬ್ ಆರಂಭಿಸಲು ಅವಕಾಶ ನೀಡಿ: ಐವನ್‌ ಆಗ್ರಹಮಂಗಳೂರು: ದ.ಕ. ಜಿಲ್ಲೆಯಲ್ಲಿ ಕೋವಿಡ್ ಹಾಗೂ ಅದರಿಂದ ಸಾವಿನ ಸಂಖ್ಯೆಯನ್ನು ನಿಯಂತ್ರಿಸಲು ಪರೀಕ್ಷೆ ಅತೀ ಅಗತ್ಯವಾಗಿದ್ದು, ಈಗಾಗಲೇ ಅನುಮತಿ ಕೋರಿರುವ ಖಾಸಗಿ ಆಸ್ಪತ್ರೆಗಳಿಗೆ ಕೋವಿಡ್ ಟೆಸ್ಟ್ ಲ್ಯಾಬ್ ಕಾರ್ಯಾರಂಭಿಸಲು ಅವಕಾಶ ನೀಡಿ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಆಗ್ರಹಿಸಿದ್ದಾರೆ.

ಮಂಗಳೂರಿನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಮಂಗಳೂರಿನ  ಫಾದರ್ ಮುಲ್ಲರ್ಸ್ ಹಾಗೂ ಕೆ.ಎಸ್. ಹೆಗ್ಡೆ ಆಸ್ಪತ್ರೆಗಳವರು ಕೋವಿಡ್ ಟೆಸ್ಟ್ ಲ್ಯಾಬ್‌ಗೆ ಅನುಮತಿ ಕೋರಿದ್ದು, ಅದಕ್ಕೆ ಐಸಿಎಂಆರ್‌ನಿಂದ ಅವಕಾಶ ನೀಡುವ ಮೂಲಕ ಕೋವಿಡ್ ನಿಯಂತ್ರಣಕ್ಕೆ ಜಿಲ್ಲಾಡಳಿತ ಮುಂದಾಗಬೇಕು ಎಂದು  ಒತ್ತಾಯಿಸಿದರು.

ಕೋವಿಡ್ ಆಸ್ಪತ್ರೆಯಾಗಿರುವ ವೆನ್‌ಲಾಕ್‌ನಲ್ಲಿ ಸ್ವಯಂ ಪ್ರೇರಿತವಾಗಿ ಕೋವಿಡ್ ತಪಾಸಣೆಗೆ ಅವಕಾಶವಿಲ್ಲ. ಈಗಾಗಲೇ ವಿದೇಶದಲ್ಲಿ ಬಂದವರಲ್ಲಿ 15 ಮಂದಿಗೆ ಕೊರೋನ ಸೋಂಕು ದೃಢಗೊಂಡಿದೆ. ವರದಿಗಾಗಿ ಮೂರ್ನಾಲ್ಕು ದಿನಗಳು ಕಾಯಬೇಕಾಗುತ್ತದೆ. ಆರೋಗ್ಯ ವಿಭಾಗವನ್ನು ಅಪ್‌ಗ್ರೇಡ್ ಮಾಡದಿದ್ದಲ್ಲಿ ಮುಂದಿನ ದಿನಗಳು ಜಿಲ್ಲೆಗೆ ಕಷ್ಟಕರವಾಗಲಿದೆ ಎಂದು ಅವರು ಹೇಳಿದರು.

Comments