ಅನ್ಯಮತೀಯ ಯುವತಿಗೆ ಮೆಸೆಜ್; ಯುವಕನ ಮೇಲೆ ನೈತಿಕ ಪೊಲೀಸ್ ಗಿರಿ, ಜೈಶ್ರೀರಾಂ ಹೇಳುವಂತೆ ಒತ್ತಾಯ


ವಿಟ್ಲ: ಅನ್ಯಮತೀಯ ಯುವತಿಗೆ ಮೆಸೆಜ್ ಮಾಡಿದ ಆರೋಪದ ಮೇಲೆ ವಿಟ್ಲದ ಕೊಳ್ನಾಡು ಗ್ರಾಮದ ಕಾಡುಮಠ ಶಾಲೆಯ ಮೈದಾನದಲ್ಲಿ ಬಾಲಕನೊಬ್ಬನಿಗೆ ಹಿಗ್ಗಾಮುಗ್ಗ ಹಲ್ಲೆ ನಡೆಸಿ ನೈತಿಕ ಪೊಲೀಸ್ ಗಿರಿ ನಡೆದ  ಘಟನೆ ವರದಿಯಾಗಿದೆ.

ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕನ್ಯಾನ ಗ್ರಾಮದ ಮರ್ತನಾಡಿ ನಿವಾಸಿ  ದಿನೇಶ್ ಎಂಬಾತ ಇನ್ನಿಬ್ಬರೊಂದಿಗೆ ಸೇರಿಕೊಂಡು ಕಾಡುಮಠ ಶಾಲೆಯಲ್ಲಿ ಬಾಲಕನ ಕಾಲರ್ ಪಟ್ಟಿ ಹಿಡಿದು ಬಾಲಕನಿಗೆ ಹಲ್ಲೆ ನಡೆಸಿದ್ದಾನೆ.ಹುಡುಗಿಗೆ ಮೆಸೆಜ್ ಮಾಡುತ್ತಿಯ ಎಂದು  ಬಾಲಕನನ್ನು ಅವಹೇಳನಕಾರಿಯಾಗಿ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ. ಪೊಲೀಸರಿಗೆ ದೂರು ನೀಡಿದರೆ ಕೈ ಕಡಿಯುತ್ತೇನೆ ಎಂದು ಅವಾಝ್ ಹಾಕಿದ್ದಾನೆ.

 ದಿನೇಶನ ಜೊತೆಗಿದ್ದವರೆ ಈ ವಿಡಿಯೋ ರೆಕಾರ್ಡ್ ಮಾಡಿದ್ದಾರೆನ್ನಲಾಗಿದ್ದು  ಬಳಿಕ ಅದನ್ನು ಯಾರೂ ಸಾಮಾಜಿಕ ಜಾಲಗಳಲ್ಲಿ ಹರಿಯಬಿಟ್ಟಿದ್ದಾರೆ. ಇದೀಗ ಈ ವಿಡಿಯೋ ಬಾರಿ ವಿವಾದವನ್ನು ಹಾಕಿದೆ. ಈ ಬಗ್ಗೆ ಮೆಲ್ಕಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments