ಸೀಲ್ ಡೌನ್ ವ್ಯಾಪ್ತಿ ತೆರವಿಗೆ ಒತ್ತಾಯ: ಬಂಟ್ವಾಳದಲ್ಲಿ ಪ್ರತಿಭಟನೆಬಂಟ್ವಾಳ; ಕೋವಿಡ್19 ಸೋಂಕು ಪತ್ತೆಯಾದ ಹಿನ್ನಲೆಯಲ್ಲಿ ಏ.19ರಂದು ರಾತ್ರಿ ಬಂಟ್ವಾಳದಲ್ಲಿ ಸೀಲ್ ಡೌನ್ ಮಾಡಲಾಗಿದ್ದು, ಇದರ ವ್ಯಾಪ್ತಿ ನಿಗದಿಪಡಿಸಿದ್ದು ಸರಿಯಾಗಿಲ್ಲ, ಇವುಗಳ ಪೈಕಿ ಕೆಲ ಪ್ರದೇಶಗಳನ್ನು ಮುಕ್ತಗೊಳಿಸಬೇಕು ಎಂದು ಒತ್ತಾಯಿಸಿ ಗಬಂಟ್ವಾಳ ಪೇಟೆಯಲ್ಲಿ ಪ್ರತಿಭಟೆ ನಡೆಯಿತು.
ಪುರಸಭೆ ಸದಸ್ಯ ಎ. ಗೋವಿಂದ ಪ್ರಭು ನೇತೃತ್ವದಲ್ಲಿ ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರದ ಬಳಿ ರಸ್ತೆಯನ್ನು ಮುಚ್ಚಲಾದ ಬ್ಯಾರಿಕೇಡ್ ಸಮೀಪ ಪ್ರತಿಭಟನೆ ನಡೆದಿದ್ದು, ಮಹಿಳೆಯರು ಸೇರಿದಂತೆ ಹಲವರು ಭಾಗವಹಿಸಿದರು. ತಹಸೀಲ್ದಾರ್ ರಶ್ಮಿ ಆಗಮಿಸಿ ಪರಿಸ್ಥಿತಿ ಅವಲೋಕಿಸಿದರು. ಬಂಟ್ವಾಳ ನಗರ ಠಾಣೆಯ ಎಸ್ ಐ ಅವಿನಾಶ್ ಮತ್ತು ಸಿಬ್ಬಂದಿ ಬಂದೋಬಸ್ತ್ ನಡೆಸಿದರು

Comments