ಹೋಮ್ ಕ್ವಾರಂಟೈನ್ ನಿಂದ ಹೊರ ಬಂದು ತಿರುಗಾಟ; ಮೂವರ ವಿರುದ್ಧ ಪ್ರಕರಣ ದಾಖಲು


ಮಂಗಳೂರು; ಹೋಂ ಕ್ವಾರಂಟೈನ್ ನಲ್ಲಿದ್ದರು ಹೊರಗಡೆ ಬಂದು ತಿರುಗಾಡಿದ ಮೂವರ ವಿರುದ್ದ ಪ್ರಕರಣ ದಾಖಲಾಗಿದೆ.
ಮುಂಬಯಿನಿಂದ ಬಂದ ಮೂವರನ್ನು ಹೋಂ ಕ್ವಾರಂಟೈನ್ ನಲ್ಲಿರಿಸಲಾಗಿತ್ತು. ಇವರು ಹೋಂ ಕ್ವಾರಂಟೈನ್ ನಲ್ಲಿ ಇರುವಾಗ ಹೊರಗಡೆ ತಿರುಗಾಡುವಂತಿಲ್ಲ. ಈ ನಿಯಮ ಇದ್ದರೂ ಇವರು ಹೊರಗಡೆ ತಿರುಗಾಡಿರುವುದು  ಕೋವಿಡ್ ಕ್ವಾರಂಟೈನ್ ಅಲರ್ಟ್ ಸಿಸ್ಟಮ್ ನಲ್ಲಿ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಮೂವರ ವಿರುದ್ಧ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments