ಸೋಂಕಿತನ ಮೊಬೈಲ್ ಮುಟ್ಟಿದ ತಪ್ಪಿಗೆ ಪೊಲೀಸ್ ಗೆ ಬಂತು ಕೊರೊನಾಮಂಗಳೂರು; ಸೋಂಕಿತನ  ಮೊಬೈಲ್ ಮುಟ್ಟಿದ್ದರಿಂದ ವಿಟ್ಲ ಪೊಲೀಸ್ ಕಾನ್ಸ್ ಟೇಬಲ್ ಗೆ  ಕೊರೊನಾ ಸೋಂಕು  ಹರಡಿದೆ.

ಮುಂಬಯಿನಿಂದ ಬಂದ ಕೊರೊನಾ ಪೀಡಿತ ಕ್ವಾರಂಟೈನ್ ಗೆ ಮುಂಚೆ ವಿಟ್ಲ ಪೊಲೀಸ್ ಠಾಣೆಗೆ ಬಂದಿದ್ದರು. ಈ ಸಂದರ್ಭದಲ್ಲಿ ಇಬ್ಬರು ಪೊಲೀಸರು ಕರ್ತವ್ಯದಲ್ಲಿದ್ದರು. ಇದರಲ್ಲಿ ಓರ್ವ ಪೊಲೀಸ್ ಸೋಂಕಿತನ ಆಧಾರ್ ಕಾರ್ಡ್ ಪಡೆದುಕೊಂಡರೆ ಮತ್ತೊಬ್ಬರು ಪೊಲೀಸ್ ಮೊಬೈಲ್ ಪಡೆದುಕೊಂಡಿದ್ದರು.‌ಆದರೆ ಆಧಾರ್ ಕಾರ್ಡ್ ಮುಟ್ಟಿದವನ ವರದಿ ನೆಗೆಟಿವ್  ಬಂದಿದ್ದು ಮೊಬೈಲ್ ಮುಟ್ಟಿದವರ ವರದಿ ಪಾಸಿಟಿವ್ ಬಂದಿದೆ.

Comments