ಸೆಂಟ್ರಲ್ ಮಾರ್ಕೆಟ್ ಎ.ಪಿ.ಎಂ.ಸಿ ಯಾರ್ಡ್ ಗೆ ಸ್ಥಳಾಂತರ.:ಜಿಲ್ಲಾ ಕಾಂಗ್ರೆಸ್ ನಿಂದ ಪರಿಶೀಲನಾ ಸಮಿತಿ ರಚನೆ.


ಮಂಗಳೂರು: ಮಂಗಳೂರಿನ ಸೆಂಟ್ರಲ್ ಮಾರ್ಕೆಟ್‍ ನಿಂದ  ಬೈಕಂಪಾಡಿ ಎ.ಪಿ.ಎಂ.ಸಿಗೆ ಸ್ಥಳಾಂತರಗೊಂಡ ತರಕಾರಿ ಸಗಟು ವ್ಯಾಪಾರಿಗಳ ಬದುಕು ಮೊದಲ ಮಳೆಗೇ ಕೊಚ್ಚಿ ಹೋಗಿದೆ. ಅವ್ಯವಸ್ಥೆಯ ಪರಮಾವಧಿಯಿಂದ ವ್ಯಾಪಾರಿಗಳು ಅತಂತ್ರರಾಗಿದ್ದಾರೆ. ಅವರ ಸರಕು ಸರಂಜಾಮುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ ಎಂದು ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿ ಆರೋಪಿಸಿದ್ದು  ಈ ಬಗ್ಗೆ ವರದಿ ಸಲ್ಲಿಸಲು ಪರಿಶೀಲನಾ ಸಮಿತಿಯನ್ನು ರಚಿಸಿದೆ. ಪರಿಶೀಲನಾ ಸಮಿತಿಯಲ್ಲಿ ಮಂಗಳೂರು ಮಹಾನಗರ ಪಲಾಇಕೆಯ ವಿಪಕ್ಷ ನಾಯಕ ಅಬ್ದುಲ್ ರವೂಫ್ ಅಧ್ಯಕ್ಷರಾಗಿದ್ದಾರೆ
ಶಶಿಧರ ಹೆಗ್ಡೆ .ಸದಾಶಿವ ಉಳ್ಳಾಲ್.ಭಾಸ್ಕರ್ ಕೆ.ಸಾಹುಲ್ ಹಮೀದ್.ನವೀನ್ ಡಿಸೋಜ.ವಸಂತ್ ಬರ್ನಾಡ್.ಪ್ರವೀಣ್ ಚಂದ್ರ ಆಳ್ವ.ಪ್ರತಿಭಾ ಕುಳಾಯಿ ಸದಸ್ಯರುಗಳಾಗಿದ್ದಾರೆ. ಸಮಿತಿಯು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ 2 ದಿನಗಳೊಳಗೆ ಸಮಗ್ರ ವರದಿಯನ್ನು ಜಿಲ್ಲಾ ಕಾಂಗ್ರೆಸ್ ಸಮಿತಿಗೆ ಸಲ್ಲಿಸಲು ಜಿಲ್ಲಾಧ್ಯಕ್ಷರಾದ ಶ್ರೀ.ಕೆ.ಹರೀಶ್ ಕುಮಾರ್ ರವರು ನಿರ್ದೇಶನ ನೀಡಿದ್ದಾರೆ ಎಂದು  ಕಚೇರಿ ಕಾರ್ಯದರ್ಶಿ ನಝೀರ್ ಬಜಾಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Comments