ಬೆಳ್ಳಾರೆ ಅಕ್ರಮ ಕಸಾಯಿ ಅಡ್ಡೆಗೆ ಪೋಲಿಸ್ ದಾಳಿ ಮೂವರ ಬಂಧನ


ಸುಳ್ಯ;ಸುಳ್ಯ ತಾಲೂಕಿನ ಬೆಳ್ಳಾರೆ ಠಾಣಾ ವ್ಯಾಪ್ತಿಯ ಮಾಸ್ತಿಕಟ್ಟೆ ಸಮೀಪ ಉಮಿಕ್ಕಳ ಎಂಬಲ್ಲಿ ಅಕ್ರಮ ಕಸಾಯಿ ಅಡ್ಡೆಗೆ ಬೆಳ್ಳಾರೆ ಪೊಲೀಸರು ಶುಕ್ರವಾರ ದಾಳಿ ಮಾಡಿದ್ದಾರೆ.

ಮಾಸ್ತಿಕಟ್ಟೆಯ ಮರದ ಅಡಿಯಲ್ಲಿ ದನದ ಮಾಂಸ ಮಾಡುವ ಖಚಿತ ಮಾಹಿತಿ ದೊರೆತ ಪೊಲೀಸರು ದಾಳಿ ಮಾಡಿ ಸುಮಾರು 40 ಕೆ.ಜಿ.ದನದ ಮಾಂಸ ಹಾಗೂ ಮಾಂಸ ಮಾಡಲು ಉಪಯೋಗಿಸಿದ ಕತ್ತಿ,ಚೂರಿ ಗಳನ್ನು ವಶಪಡಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಹಾರಿಸ್,ಮಹಮ್ಮದ್ ಸಿನಾನ್,ಉಮ್ಮರ್ ಫಾರೂಕ್ ಎಂಬವರನ್ನು ಬಂಧಿಸಿದ್ದಾರೆ. ಇನ್ನಿಬ್ಬರು ಪರಾರಿಯಾಗಿರುವುದಾಗಿ ತಿಳಿದು ಬಂದಿದೆ.ಕರ್ನಾಟಕ ಗೋ ಹತ್ಯೆ ನಿಷೇಧ ಕಾಯ್ದೆಯಂತೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Comments