ಕ್ವಾರಂಟೈನ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಮೂಡಬಿದ್ರೆ ವ್ಯಕ್ತಿಗೆ ಕೊರೊನಾ ಪಾಸಿಟಿವ್
ಮಂಗಳೂರು; ನಿನ್ನೆ ಮೂಡಬಿದ್ರೆ ಕ್ವಾರಂಟೈನ್ ಕೇಂದ್ರ ದಲ್ಲಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಗೆ ಕೊರೊನಾ ದೃಢಪಟ್ಟಿದೆ.
ಮುಂಬಯಿನಿಂದ ಎರಡು ದಿನಗಳ ಹಿಂದೆ ಬಂದ ವ್ಯಕ್ತಿಯನ್ನು ಮೂಡಬಿದ್ರೆ ಕಡಂದಲೆಯ ಶಾಲೆಯಲ್ಲಿ ‌ಕ್ವಾರಂಟೈನ್ ನಲ್ಲಿರಿಸಲಾಗಿತ್ತು.ರಾತ್ರಿ ಕ್ವಾರಂಟೈನ್ ನಲ್ಲಿರಿಸಿದ ಈ ವ್ಯಕ್ತಿ ಬೆಳಿಗ್ಗೆ ಆಗುವಾಗ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿತ್ತು.ಮೃತದೇಹದಿಂದ ಗಂಟಲು ದ್ರವ ಪರೀಕ್ಷಿಸಿದಾಗ   ಕೊರೊನಾ ಪಾಸಿಟಿವ್ ದೃಢಪಟ್ಟಿದೆ.  ಈ ಆತ್ಮಹತ್ಯೆ ಪ್ರಕರಣ ಸೇರಿದಂತೆ ಜಿಲ್ಲೆಯಲ್ಲಿ 6 ಜನ ಕೊರೊನಾ ಸೋಂಕಿತರು ಸಾವನ್ನಪ್ಪಿದಂತಾಗಿದೆ.

Comments