ಸೀಲ್ ಡೌನ್ ಏರಿಯಾದಲ್ಲಿ ಪುಂಡಾಟ ನಡೆಸಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ಮಾಜಿ ಸಚಿವ ರಮಾನಾಥ ರೈ


ಮಂಗಳೂರು: ಕಳೆದ ಒಂದು ತಿಂಗಳಿನಿಂದ ಸೀಲ್ ಡೌನ್ ಆಗಿರುವ ಬಂಟ್ವಾಳ ಪೇಟೆಯಲ್ಲಿ ಸೀಲ್ ಡೌನ್ ತೆರವು ಮಾಡುವಂತೆ ನಿನ್ನೆ ಜನರು ಪ್ರತಿಭಟನೆ ನಡೆಸಿದ್ದು, ಈ ವಿಚಾರಕ್ಕೆ ಸಂಭಸಿದಂತೆ ಸ್ಥಳೀಯ ಮಾಜಿ ಶಾಸಕ ರಮಾನಾಥ ರೈ ಪ್ರತಿಕ್ರಿಯೆ ನೀಡಿದ್ದಾರೆ.
ಸೀಲ್ ಡೌನ್ ವಾಪಸ್ಸು ಪಡೆಯಬೇಕೆಂಬ ಬೇಡಿಕೆ ಇದೆ. ನಾನು ಒಂದು ಸಲ ಸೀಲ್ ಡೌನ್ ವ್ಯಾಪ್ತಿಯ ಹೊರಗಡೆ ಸಾಂತ್ವನ ಹೇಳಲು ಹೋಗಿದ್ದೆ.ಆದ್ರೆ ಸೀಲ್ ಡೌನ್ ಏರಿಯದೊಳಗೆ ಹೋಗಿಲ್ಲ. ಅದ್ರೆ ಬಿಜೆಪಿ ಮುಖಂಡರು, ಕಾರ್ಯಕರ್ತರು, ಕಸಬಾ ಗ್ರಾಮದ ಸೀಲ್ ಡೌನ್ ಏರಿಯಾದೊಳಗೆ ಹೋಗಿ ಗಲಾಟೆ ಮಾಡಿದ್ದಾರೆ.ಈ ಹಿಂದೆ ನನಗೆ ವಿರೋಧ ವ್ಯಕ್ತಪಡಿಸಿದ ಇವರು, ಸೀಲ್ ಡೌನ್ ಒಳಗೆ ಹೋಗಿ ಗಲಾಟೆ ಮಾಡಿದ್ದು ಸರಿನಾ.?, ಅಂತ ಪ್ರಶ್ನೆ ಮಾಡಿದ್ರು.ಅಧಿಕಾರಿಗಳು, ಪೊಲೀಸರ ಮಧ್ಯೆ ಗಲಾಟೆ ಮಾಡುವುದು ಸರಿಯಲ್ಲ. ನಾನು ಹೋಗಿರುವ ಸಂದರ್ಭದಲ್ಲಿ ರಾಜಕೀಯ ಮಾಡಿ ನನ್ನ ವಿರುದ್ಧ ಅರೋಪ ಮಾಡಿದ್ರು.ಜಿಲ್ಲಾಡಳಿತ ಈ ಬಗ್ಗೆ ಪರಿಶೀಲನೆ ನಡೆಸಿ ಪುಂಡಾಟ ನಡೆಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಿದೆ ಎಂದು ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments