ಮಾಜಿ ಅಂಡರ್​ ವರ್ಲ್ಡ್ ಡಾನ್ ಮುತ್ತಪ್ಪ ರೈ ಇನ್ನಿಲ್ಲ..!

ಮಾಜಿ ಅಂಡರ್​ ವರ್ಲ್ಡ್ ಡಾನ್ ಮುತ್ತಪ್ಪ ರೈ ಮತ್ತು ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕರಾದ ಮುತ್ತಪ್ಪ ರೈ ಇಂದು ನಿಧರಾಗಿದ್ದಾರೆ.

ಇಂದು ಮುಂಜಾನೆ 2.30 ಕ್ಕೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ  ನಿಧನರಾದರು. ಕಳೆದ ಕೆಲ ದಿನಗಳ ಹಿಂದೆ ಮುತ್ತಪ್ಪ ರೈ ಅವರು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು.

ಎರಡು ವರ್ಷದಿಂದ ಕ್ಯಾನ್ಸರ್​ನಿಂದ ಬಳಲುತ್ತಿರುವ ಅವರ ಆರೋಗ್ಯ ಸ್ಥಿತಿ ಇತ್ತೀಚೆಗೆ ಗಂಭೀರವಾಗಿತ್ತು. ಭಾರಿ ಸಾವು ನೋವಿನ ಮಧ್ಯೆ ಹೋರಾಡುತ್ತಿರುವ ಮುತ್ತಪ್ಪ ರೈ ಅವರ ಆರೋಗ್ಯ ಸ್ಥಿತಿ ಇತ್ತೀಚಿನ ದಿನಗಳಲ್ಲಿ ತೀವ್ರ ಹದಗೆಟ್ಟಿತ್ತು.

ಮುತ್ತಪ್ಪ ರೈ ಅವರು ಒಂದು ಕಾಲದಲ್ಲಿ ಭೂಗತ ಲೋಕವನ್ನು ಆಳಿದರಾದರೂ, ಹಲವು ವರ್ಷಗಳಿಂದ ಡಾನ್​ ಗಾರಿಕೆ ತ್ಯಜಿಸಿ ಸಮಾಜ ಸೇವೆಗೆ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದರು.

‘ಜಯಕರ್ನಾಟಕ’ ಸಂಘಟನೆ ಕಟ್ಟಿ ಆ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.

2013 ರಲ್ಲಿ ಇವರ ಪತ್ನಿ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. 2018ರಲ್ಲಿ ಇವರಿಗೆ ಕ್ಯಾನ್ಸರ್ ಇರುವುದು ದೃಢಪಟ್ಟಿತ್ತು.ತಮ್ಮ ಕೊನೆಯ ಉಸಿರುವವರೆಗೂ ಕ್ಯಾನ್ಸರ್ ವಿರುದ್ಧ ಹೋರಾಟ ಮಾಡಿಯೇ ತೀರುತ್ತೇನೆ ಎಂದಿದ್ದರು.

ಹೇಳಿದಂತೆಯೇ ಅದೇ ಹೋರಾಟದಲ್ಲಿರುವಾಗಲೇ ಅವರು ಇಹಲೋಕ ತ್ಯಜಿಸಿದ್ದಾರೆ..


Comments