ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದಿದ್ದರೆ ಬಸ್ ಓಡಾಟ ನಡೆಸಲು ಸಾಧ್ಯವಿಲ್ಲ; ಖಾಸಗಿ ಬಸ್ ಮಾಲಕರ ಪಟ್ಟು


ಮಂಗಳೂರು; ರಾಜ್ಯದಲ್ಲಿ KSRTC ಬಸ್ ಸಂಚಾರ ಆರಂಭವಾಗಿದೆ.ಆದ್ರೆ ಕರಾವಳಿಯಲ್ಲಿ ಪಾಬ್ರಲ್ಯ ಹೊಂದಿರುವ ಖಾಸಗಿ ಬಸ್ ಗಳು ಮಾತ್ರ ಇನ್ನೂ ರಸ್ತೆಗಿಳಿದಿಲ್ಲ..ಮಂಗಳೂರಿನ ಸಂಚಾರ ವ್ಯವಸ್ಥೆಯ ಪ್ರಮುಖ ಭಾಗವಾಗಿರುವ ಖಾಸಗಿ ಬಸ್ ಜೂನ್  ಆರಂಭದವರೆಗೆ ಸಂಚಾರ ಮಾಡೋದೇ ಅನುಮಾನವಾಗಿದೆ..ಮಂಗಳೂರಿನ ಬಸ್ ಮಾಲಕರ ಸಂಘ ಸರ್ಕಾರದ ಮುಂದೆ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದು, ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದಿದ್ದರೆ ಬಸ್ ಓಡಾಟ ನಡೆಸಲು ಸಾಧ್ಯವಿಲ್ಲ ಅಂತಾ ಹಠ ಹಿಡಿದಿದೆ..ಸರ್ಕಾರ ಆರು ತಿಂಹಳ ಟ್ಯಾಕ್ಸ್ ಕಡಿತ ಮಾಡಬೇಕು..ಟಿಕೆಟ್ ದರ ಹೆಚ್ಚಳಕ್ಕೆ ಅವಕಾಶ ಮಾಡಿಕೊಡಬೇಕು..ಈ ಷರತ್ತುಗೆ ಸರ್ಕಾರ ಒಪ್ಪಿದರೆ ಮಾತ್ರ ಬಸ್ ಗಳ ಓಡಾಟ ಮಾಡಬಹುದಂತಾ ಹೇಳಿದೆ..ಇದರಿಂದ ಜನ ಮಾತ್ರ ಕಷ್ಟ ಪಡುವಂತೆ ಆಗಿದೆ..ದಕ್ಷಿಣ ಕನ್ನಡ ಜಿಲ್ಲೆಯಲ್ಲಿ KSRTC ಗಿಂತ ಖಾಸಗಿ ಬಸ್ ಗಳೇ ಅಧಿಕವಾಗಿದ್ದು,ಜನ ಅತೀ ಹೆಚ್ಚಾಗಿ ಅವಲಂಭಿತವಾಗಿರೋದು ಖಾಸಗಿ ಬಸ್ ಗಳನ್ನು ..ಹಾಗಾಗಿ ಬಸ್ ಸಂಚಾರ ಮಾಡಿದಿದ್ರೆ ಕರಾವಳಿಯ ಸಾರಿಗೆ ವ್ಯವಸ್ಥೆ ಯೇ ಸ್ತಬ್ಧವಾಗುವ ಆತಂಕ ಎದುರಾಗಿದೆ.

Comments