ಜಪ್ಪಿನಮೊಗರು ಗ್ರಾಮದ ಜಪ್ಪು ಪಟ್ಣ ಪ್ರದೇಶ ಕಂಟೈನ್‌ಮೆಂಟ್ ಝೋನ್, ಸೀಲ್‌ಡೌನ್ ಗೆ ಸಿದ್ಧತೆಮಂಗಳೂರು: ಮಂಗಳೂರಿನ ಜಪ್ಪು ಪಟ್ಣ ನಿವಾಸಿಗೆ (ರೋಗಿ ಸಂಖ್ಯೆ 1094) ಭಾನುವಾರ ಕೊರೋನಾ ಸೋಂಕು ಧೃಡಗೊಂಡ ಹಿನ್ನೆಲೆಯಲ್ಲಿ ಜಪ್ಪಿನಮೊಗರು ಗ್ರಾಮದ ಜಪ್ಪು ಪಟ್ಣ ಪ್ರದೇಶವನ್ನು ಕಂಟೈನ್‌ಮೆಂಟ್ ಝೋನ್ ಆಗಿ ಘೋಷಿಸಿ ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ಆದೇಶ ಹೊರಡಿಸಿದ್ದಾರೆ.
ಈ ಪ್ರದೇಶದಲ್ಲಿ 48 ಮನೆ, ಎರಡು ಅಂಗಡಿ, ಒಂದು ಶಾಲೆ ಇದ್ದು, 205 ಮಂದಿ ವಾಸಿಸುತ್ತಿದ್ದಾರೆ. ಜಪ್ಪು ಪಟ್ಣ ಸುತ್ತಲಿನ 5 ಕಿ.ಮೀ. ಪ್ರದೇಶವನ್ನು ಬಫರ್ ಝೋನ್ ಆಗಿ ಗುರುತಿಸಲಾಗಿದೆ. ಈ ಪ್ರದೇಶದಲ್ಲಿ ಕೋವಿಡ್ 19 ನಿಯಂತ್ರಣಕ್ಕಾಗಿ ಮಂಗಳೂರು ಮಹಾನಗರ ಪಾಲಿಕೆಯ ಎಕ್ಸಿಕ್ಯೂಟಿವ್ ಇಂಜಿನಿಯರ್-3 ಅವರನ್ನು ಇನ್ಸಿಡೆಂಟ್ ಕಮಾಂಡರ್ ಆಗಿ ನೇಮಿಸಲಾಗಿದೆ. ಜಪ್ಪು ಪಟ್ಣ ಪ್ರದೇಶವನ್ನು ಸಂಪೂರ್ಣ ಸೀಲ್‌ಡೌನ್ ಮಾಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸ್ತುತ 9 ಪ್ರದೇಶಗಳು ಕಂಟೈನ್ಮೆಂಟ್ ಝೋನ್‌ನಲ್ಲಿವೆ. ಉಪ್ಪಿನಂಗಡಿಯ ನಿರ್ದಿಷ್ಟ ಪ್ರದೇಶ, ಬಂಟ್ವಾಳ ಕಸಬಾ, ಪಡೀಲ್‌ನ ಫಸ್ಟ್ ನ್ಯೂರೋ ಆಸ್ಪತ್ರೆ, ಬಂಟ್ವಾಳದ ನರಿಕೊಂಬು, ಮಂಗಳೂರಿನ ಕುಲಶೇಖರ ಕಕ್ಕೆಬೆಟ್ಟು, ಬೋಳೂರು, ಸೋಮೇಶ್ವರ ಪಿಲಾರು, ಸುರತ್ಕಲ್‌ನ ಗುಡ್ಡೆಕೊಪ್ಲ, ಜಪ್ಪಿನಮೊಗರುವಿನ ಜಪ್ಪು ಪಟ್ಣ ನಿರ್ಬಂಧಿತ ಪ್ರದೇಶಗಳಾಗಿವೆ.

Comments