ಅಶ್ರಫ್ ಕಿನಾರ ಅವರ ಕಾರಿಗೆ ದುಷ್ಕರ್ಮಿಗಳಿಂದ ಹಾನಿ


ಮಂಗಳೂರು :ತನ್ನ ಮನೆಯ ಪಕ್ಕ ನಿಲ್ಲಿಸಲಾಗಿದ್ದ ಕಾರನ್ನು  ಕಿಡಿಗೇಡಿಗಳು ಹಾನಿಗೊಳಿಸಿದ ಘಟನೆ ನಗರದ ಕುದ್ರೋಳಿಯಲ್ಲಿ ನಡೆದಿದೆ.
 
ಹಲವು ಸಂಘ ಸಂಸ್ಥೆಗಳ ಮುಂಚೂಣಿ ನಾಯಕ ಅಶ್ರಫ್ ಕಿನಾರ ಮಂಗಳೂರು, ಅವರ ಕಾರನ್ನು ಮೇ 28 ರಂದು ರಾತ್ರಿ ತಮ್ಮ ಮನೆಯ ಸಮೀಪದ ಪಾರ್ಕಿಂಗ್ ನಲ್ಲಿರಿಸಿದ್ದರು.
 ದುಷ್ಕರ್ಮಿಗಳು ತಡರಾತ್ರಿಯಲ್ಲಿ ಕಾರಿನ ಎದುರಿನ ಮತ್ತು ಕಿಟಕಿ ಗಾಜುಗಳನ್ನು ಹುಡಿಮಾಡಿ ಹಾನಿಗೊಳಿಸಿದ್ದಾರೆ.ಸಣ್ಣ ಮರದ ಕೋಲು ಕಾರಿನೊಳಗೆ ಪತ್ತೆಯಾಗಿದ್ದು, ಬಂದರ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Comments