ಮಂಗಳೂರಿನಲ್ಲಿ ಕೊರೊನಾ ಪೀಡಿತ ಅಜ್ಜ ಮೊಮ್ಮಗಳು ಗುಣಮುಖ; ಡಿಸ್ಚಾರ್ಜ್ ಆಗಿ ಊರಿಗೆ ಬಂದಾಗ ಹೃದಯಸ್ಪರ್ಶಿ ಸ್ವಾಗತ


ಮಂಗಳೂರು; ಕೊರೊನಾ ಸೋಂಕಿತ ಅಜ್ಜ ಮೊಮ್ಮಗಳು ಗುಣಮುಖರಾಗಿ ಊರಿಗೆ ಬಂದ ಸಂದರ್ಭದಲ್ಲಿ ಹೃದಯಸ್ಪರ್ಶಿ ಯಾಗಿ ಊರಿನ ಜನ ಸ್ವಾಗತಿಸಿದ್ದಾರೆ.
ಮಂಗಳೂರಿನ ಬೋಳೂರಿನ ಅಜ್ಜ ಮತ್ತು ಮೊಮ್ಮಗಳಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿತ್ತು. ಅದಕ್ಕೂ ಮೊದಲು ಕೊರೊನಾ ಪಾಸಿಟಿವ್ ಆಗಿ ಅಜ್ಜನ ಪತ್ನಿ ಸಾವನ್ನಪ್ಪಿದ್ದರು.

 

ಬಳಿಕ ಬೋಳೂರಿನ 62 ವರ್ಷದ ವೃದ್ಧ, 11 ವರ್ಷದ ಬಾಲಕಿ ಗೆ  ಕೊರೊನಾ ಇರುವುದು ದೃಢಪಟ್ಟಿತ್ತು. ಚಿಕಿತ್ಸೆ ಬಳಿಕ ಅವರು ಗುಣಮುಖ ರಾಗಿದ್ದು ಇಂದು ಆಸ್ಪತ್ರೆಯಿಂದ ಮನೆಗೆ ತೆರಳಿದ್ದರು.ಈ ಸಂದರ್ಭದಲ್ಲಿ ಸೀಲ್ ಡೌನ್ ಆಗಿರುವ ಬೋಳೂರಿನ ಜನತೆ ಅವರಿಗೆ ಧೈರ್ಯ ತುಂಬಿ ಸ್ವಾಗತಿಸಿದರು.

Comments