ಹೆರಿಗೆಗೆಂದು ದುಬೈ ನಿಂದ ಬಂದ ಮಹಿಳೆಗೆ ಸಿಗದ ವೈದ್ಯರ ಚಿಕಿತ್ಸೆ; ಹೊಟ್ಟೆಯಲ್ಲಿಯೆ ಮಗು ಸಾವುಮಂಗಳೂರು:ದುಬೈ ನಿಂದ ವಿಮಾನದಲ್ಲಿ ಬಂದು ಕ್ವಾರಂಟೈನ್​ನಲ್ಲಿದ್ದ ಗರ್ಭಿಣಿಗೆ ಚಿಕಿತ್ಸೆ ದೊರಕದ ಕಾರಣ ಹೊಟ್ಟೆಯಲ್ಲಿ ಮಗು ಸಾವನ್ನಪ್ಪಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.


ಮಹಿಳೆ ದುಬೈನಿಂದ ಹೆರಿಗೆಗೆಂದು ದುಬೈ ನಿಂದ ಬಂದ ಮೊದಲ ವಿಮಾನದಲ್ಲಿ ಪತಿಯೊಂದಿಗೆ ಮಂಗಳೂರಿಗೆ ಬಂದಿದ್ದರು. 

ಈ ಮಹಿಳೆಯನ್ನು  ಗಂಟಲು ದ್ರವ ಪರೀಕ್ಷೆ ನಡೆಸಿದ್ದು, ವರದಿಯಲ್ಲಿ ನೆಗೆಟಿವ್ ಬಂದಿತ್ತು. ಕ್ವಾರಂಟೈನ್​ನಲ್ಲಿರುವ ಗರ್ಭಿಣಿಯರ ತಪಾಸಣಾ ವರದಿ ನೆಗೆಟಿವ್ ಬಂದಕಾರಣ ಅವರನ್ನು ಹೋಮ್ ಕ್ವಾರಂಟೈನ್​ಗೆ ಕಳುಹಿಸಲಾಗಿತ್ತು. ಆದರೆ ನಗರದ ಶಿವಭಾಗ್​ನಲ್ಲಿರುವ ಫ್ಲ್ಯಾಟ್​ಗೆ ಹೋಗಲು ಮುಂದಾದಾಗ  ಫ್ಲ್ಯಾಟ್ ನಿವಾಸಿಗಳು ಅಲ್ಲಿಗೆ ಬಾರದಂತೆ ಹೇಳಿದ್ದಾರೆ.ಅಲ್ಲದೆ ಕ್ವಾರಂಟೈನ್​ನಲ್ಲಿರುವ ಗರ್ಭಿಣಿಯರಿಗೆ ವೈದ್ಯರು, ನರ್ಸ್​ಗಳಿಂದ ಸೂಕ್ತ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗುತ್ತದೆ ಎಂದು ಜಿಲ್ಲಾಡಳಿತ ಹೇಳಿತ್ತು. ಈ ಗರ್ಭಿಣಿ ಬರುವ ಮೊದಲೇ ಫಳ್ನೀರ್​ನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ವ್ಯವಸ್ಥೆ ಮಾಡಲಾಗಿತ್ತು. ನಂತರ ನಗರದ ಖಾಸಗಿ ಆಸ್ಪತ್ರೆಗೆ ಬಂದಾಗ ಮಹಿಳೆಯ ಸ್ಥಿತಿ ಗಂಭೀರವಾಗಿದ್ದು, ತಾಯಿಯನ್ನು ಉಳಿಸಲು ಬಲವಂತದ ಹೆರಿಗೆ ಮಾಡಿಸಬೇಕು ಎಂದಿದ್ದಾರೆ. ಆದರೆ ಮಗು ಹೊಟ್ಟೆಯಲ್ಲಿಯೇ ಮೃತಪಟ್ಟಿದೆ.

Comments