ಮಸ್ಕತ್ ನಿಂದ ಇಂದು ಮಂಗಳೂರಿಗೆ ವಿಮಾನ


ಮಂಗಳೂರು; ಮಸ್ಕತ್ ನಿಂದ ಅನಿವಾಸಿ ಭಾರತೀಯರನ್ನು ಹೊತ್ತುಕೊಂಡು ಇಂದು ಮಂಗಳೂರಿಗೆ ವಿಮಾನ ಬರಲಿದೆ.

ವಿದೇಶದಿಂದ ಮಂಗಳೂರಿಗೆ ಆಗಮಿಸುತ್ತಿರುವ  ಮೂರನೇ ವಿಮಾನ  ಇದಾಗಿದೆ. ಈ ವಿಮಾನದಲ್ಲಿ ಮಸ್ಕತ್ ನಿಂದ ಮಂಗಳೂರಿಗೆ  63 ಮಂದಿ ಆಗಮಿಸಲಿದ್ದಾರೆ.ಮಸ್ಕತ್ ನಿಂದ ಏರ್ ಇಂಡಿಯಾ ಎಕ್ಸ್ ಪ್ರೆಸ್ IX817 ಮೂಲಕ ಬೆಂಗಳೂರಿಗೆ ಈ ವಿಮಾನ ಬರಲಿದ್ದು  ಬೆಂಗಳೂರಿನಲ್ಲಿ ಲ್ಯಾಂಡ್ ಆಗಿ ಬಳಿಕ ಈ  ವಿಮಾನ ಮಂಗಳೂರಿಗೆ ಬರಲಿದೆ.

ರಾತ್ರಿ 8.10ರ ಸುಮಾರಿಗೆ ಮಂಗಳೂರು ಏರ್ ಪೋರ್ಟ್ ‌ಗೆ ವಿಮಾನ ಆಗಮನವಾಗಲಿದೆ.

Comments