ವಿಟ್ಲದಲ್ಲಿ ಬಾಲಕನಿಗೆ ಹಲ್ಲೆ ಪ್ರಕರಣ; ಮೂವರು ಅಪ್ರಾಪ್ತರ ಬಂಧನ


ಮಂಗಳೂರು;  ಹುಡುಗಿಗೆ ಮೆಸೆಜ್ ಮಾಡಿರುವುದನ್ನು ಪ್ರಶ್ನಿಸಿ ಬಾಲಕನಿಗೆ ತಂಡವೊಂದು ಹಲ್ಲೆ ನಡೆಸಿ ನೈತಿಕ ಪೊಲೀಸ್ ಗಿರಿ ಮೆರೆದ ವಿಡಿಯೋ ವೈರಲ್ ಆಗುತ್ತಿದ್ದಂತೆ ವಿಟ್ಲ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಬಂಧಿತರು 16-17 ವರ್ಷ ಪ್ರಾಯದ ಅಪ್ರಾಪ್ತರಾಗಿದ್ದಾರೆ.  ಎ. 21 ರಂದು ವಿಟ್ಲದ ಕೊಲ್ನಾಡು ಗ್ರಾಮದ ಕುಡ್ತಮುಗೇರಿನಲ್ಲಿ ಆರೋಪಿ ದಿನೇಶ್ ಕನ್ಯಾನ ಮತ್ತು ಮೂವರು ಅಪ್ರಾಪ್ತ ಬಾಲಕರು ಅಡ್ಡಗಟ್ಟಿ ಹುಡುಗಿಗೆ ಮೆಸೆಜ್ ಮಾಡುವ ವಿಚಾರದಲ್ಲಿ ಹಲ್ಲೆ ಜೈಶ್ರೀರಾಂ ಹೇಳುವಂತೆ ಒತ್ತಾಯಪಡಿಸಿದ್ದರು. ಇದರ ವಿಡಿಯೋ ಇದೀಗ ವೈರಲ್ ಆಗಿದ್ದು ಘಟನೆ ಸಂಬಂಧ ಮೂವರು ಅಪ್ರಾಪ್ತರನ್ನು ಪೊಲೀಸರು ಬಂಧಿಸಿದ್ದಾರೆ.

Comments