ಕಡಬ : ಮಸೀದಿಯಲ್ಲಿ ನಮಾಜು ಮಾಡುತ್ತಿರುವಾಗ ಕುಸಿದು ಬಿದ್ದು ವ್ಯಕ್ತಿ ಸಾವು


ಕಡಬದ ಕಳಾರ ಎಂಬಲ್ಲಿ ಮಸೀದಿಯಲ್ಲಿ ನಮಾಜು ಮಾಡುವ ಸಮಯದಲ್ಲಿ ವ್ಯಕ್ತಿಯೋರ್ವರು ಕುಸಿದು ಬಿದ್ದು ಮೃತಪಟ್ಟ ಘಟನೆ    ನಡೆದಿದೆ.

ಕಡಬ ಸಮೀಪದ ಕಳಾರ ನಿವಾಸಿ ಅಬ್ಬುಲ್ ಖಾದರ್ ಕಳಾರ ಎಂಬವರೇ ಮೃತಪಟ್ಟ ವ್ಯಕ್ತಿ. ಕಳಾರದ ಮಸ್ಜಿದ್ ಪಕ್ಕದಲ್ಲಿರುವ ಹೋಟೆಲ್ ನಡೆಸುತ್ತಿದ್ದ ಅಬ್ದುಲ್ ಖಾದರ್ ರವರು ಎಂದಿನಂತೆ ಇವತ್ತು ಮುಂಜಾನೆಯೂ ನಮಾಜ್ ಮಾಡುವ ಸಲುವಾಗಿ ಮಸೀದಿಗೆ ಬಂದು ಕೈ ಕಟ್ಟಿ ಪ್ರಾರ್ಥನೆ ಸಲ್ಲಿಸುತ್ತಿರುವಾಗ ಏಕಾಏಕಿ ಕುಸಿದು ಬಿದ್ದಿದ್ದಾರೆ. ಇವರನ್ನು ಮನೆಗೆ ಕೊಂಡೊಯ್ದು ಬಳಿಕ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಇದೀಗ ಇವರು ಕುಸಿದು ಬಿದ್ದು ಮೃತಪಡುತ್ತಿರುವ ಮಸೀದಿಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Comments